ಜೈಪುರ: ಪ್ರಧಾನಿ ಮೋದಿಯವರ ಅಲೆ ಜೋರಾಗಿದೆ ಎನ್ನುವುದಕ್ಕೆ ಇದೊಂದು ನಿದರ್ಶನ. ಮದುವೆ ಕಾರ್ಡ್ ನಲ್ಲೂ ಮೋದಿ ಗುಂಗು ಜೋರಾಗಿದೆ.
ರಾಜಸ್ತಾನದಲ್ಲಿ ನಡೆಯಲಿರುವ ಮದುವೆ ಆಮಂತ್ರಣ ಪತ್ರಿಕೆ ವಿಶಿಷ್ಟ ಕಾರಣಕ್ಕೆ ಗಮನ ಸೆಳೆಯುತ್ತಿದೆ. ಈ ಆಹ್ವಾನ ಪತ್ರಿಕೆಯಲ್ಲಿ ಮದುವೆಯ ವಿವರಣೆಗಿಂತ ಹೆಚ್ಚು ಸ್ವಚ್ಛ ಭಾರತ ಸ್ಲೋಗನ್ ಗಳೇ ಕಂಡುಬರುತ್ತಿದೆ.
ಸ್ವಚ್ಛ ಭಾರತ ಸ್ಲೋಗನ್ ಜತೆಗೆ ಪ್ರಧಾನಿ ಮೋದಿಯವರ ಜನಪ್ರಿಯ ಸಾಲುಗಳನ್ನೂ ಸೇರಿಸಲಾಗಿದೆ. ಅಂದ ಹಾಗೆ ಇದು ಪಂಚಾಯತ್ ಅಧಿಕಾರಿಗಳ ಸಂಬಂಧಿಕರ ಮದುವೆಯಂತೆ. ಅದಕ್ಕೇ ಈ ವಿಶೇಷ ಆಮಂತ್ರಣ ಪತ್ರಿಕೆ.
ಇತ್ತೀಚೆಗಷ್ಟೇ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ತಮ್ಮ ಸಹೋದರಿಯ ಮದುವೆ ಆಹ್ವಾನ ಪತ್ರಿಕೆಯಲ್ಲಿ ಸ್ವಚ್ಛ ಭಾರತ ಲೋಗೋ ಹಾಕಿ ಪ್ರಧಾನಿಗೆ ಟ್ವೀಟ್ ಮಾಡಿದ್ದರು. ಇದನ್ನು ಸ್ವತಃ ಮೋದಿ ಮೆಚ್ಚಿ, ರಿಟ್ವೀಟ್ ಮಾಡಿದ್ದಲ್ಲದೆ, ಆ ಯುವಕನನ್ನು ಫಾಲೋ ಮಾಡಿದ್ದರು. ಇದೀಗ ರಾಜಸ್ಥಾನಿ ಕುಟುಂಬ ಮೋದಿಯನ್ನು ಎಷ್ಟು ಇಂಪ್ರೆಸ್ ಮಾಡುತ್ತದೆ ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ