ಸಮಾಜವಾದಿ ಪಕ್ಷದ ಶಾಸಕನ ಬಾಡಿಗಾರ್ಡ್ ಖಾತೆಯಲ್ಲಿ 100 ಕೋಟಿ ರೂ ಪತ್ತೆ

Webdunia
ಬುಧವಾರ, 4 ಜನವರಿ 2017 (19:26 IST)
ಸಮಾಜವಾದಿ ಪಕ್ಷದ ಶಾಸಕನ ಬಾಡಿಗಾರ್ಡ್ ಖಾತೆಗೆ 100 ಕೋಟಿ ರೂಪಾಯಿಗಳು ಜಮೆಯಾಗಿರುವುದು ಬೆಳಕಿಗೆ ಬಂದಿದೆ.
 
ಸಮಾಜವಾದಿ ಪಕ್ಷದ ಶಾಸಕ ಇರ್ಫಾನ್ ಸೋಳಂಕಿ ಬಾಡಿಗಾರ್ಡ್ ಗುಲಾಮ್ ಜಿಲಾನಿ ಮಾಲ್ ರೋಡ್ ಶಾಖೆಯಲ್ಲಿ ಎಸ್‌ಬಿಐ ಖಾತೆಯನ್ನು ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಕೌಶಲ್ ರಾಜ್ ಶರ್ಮಾ ತಿಳಿಸಿದ್ದಾರೆ.
 
ಗುಲಾಮ್ ಜಿಲಾನಿ ನಿನ್ನೆ ರಾತ್ರಿ ಎಟಿಎಂನಿಂದ ಹಣ ಪಡೆಯಲು ಹೋದಾಗ ಆತನ ಖಾತೆಯಲ್ಲಿ ಒಟ್ಟು 99,99,02,724 ರೂಪಾಯಿಗಳಿರುವುದು ಪತ್ತೆಯಾಗಿದೆ.
 
ಜಿಲಾನಿ ಕೂಡಲೇ ಸಮಾಜವಾದಿ ಪಕ್ಷದ ಶಾಸಕ ಇರ್ಫಾನ್ ಸೋಳಂಕಿಗೆ ಮಾಹಿತಿ ನೀಡಿದ್ದಾರೆ. ಶಾಸಕ ಇರ್ಫಾನ್ ಕೂಡಲೇ ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ.
 
ಎಸ್‌ಬಿಐ ಶಾಖೆಯ ವ್ಯವಸ್ಥಾಪಕರೊಂದಿಗೆ ಚರ್ಚೆ ನಡೆಸಲಾಗಿದ್ದು, ಜಿಲಾನಿಗೆ ಕೂಡಲೇ ಅರ್ಜಿ ಸಲ್ಲಿಸುವಂತೆ ಕೋರಿದ್ದಾರೆ ಎಂದು ಜಿಲ್ಲಾಧಿಕಾರಿ ಶರ್ಮಾ ಹೇಳಿದ್ದಾರೆ.
 
ಗುಲಾಮ್ ಜಿಲಾನಿ ಖಾತೆಯನ್ನು ಸೀಜ್ ಮಾಡಲಾಗಿದ್ದು, ಸದ್ಯಕ್ಕೆ ಜಿಲಾನಿ ಹಣವನ್ನು ಬ್ಯಾಂಕ್‌ನಿಂದ ಪಡೆಯುವಂತಿಲ್ಲ ಎಂದು ತಿಳಿಸಿದ್ದಾರೆ.
 
ಬಾಡಿಗಾರ್ಡ್ ಗುಲಾಮ್ ಜಿಲಾನಿ ಕುಷಿನಗರ್ ಜಿಲ್ಲೆಯವರಾಗಿದ್ದು, ನಗರದ ಜಾಜ್‌ಮೌವು ಪ್ರದೇಶದಲ್ಲಿ ಬಾಡಿಗೆ ಕೋಣೆಯೊಂದರಲ್ಲಿ ವಾಸಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಡ್ನಿಯಲ್ಲಿ ನಡೆದ ಮಾರಣಾಂತಿಕ ದಾಳಿ ಬಗ್ಗೆ ಯುಕೆ ಪ್ರಧಾನಿ ಮೊದಲ ರಿಯಾಕ್ಷನ್

2 ವರ್ಷದ ಬಾಲಕಿ ರೇಪ್ ಎಸಗಿ, ಹತ್ಯೆ ಮಾಡಿದವನಿಗೆ ಕ್ಷಮದಾನಕ್ಕೆ ನಿರಾಕರಿಸಿದ ರಾಷ್ಟ್ರಪತಿ

ಆರ್‌ಎಸ್‌ಎಸ್‌, ಬಿಜೆಪಿ ಸಿದ್ಧಾಂತ ದೇಶವನ್ನು ನಾಶಪಡಿಸುತ್ತದೆ: ಮಲ್ಲಿಕಾರ್ಜುನ ಖರ್ಗೆ

ಬಿಜೆಪಿ ಸಾರ್ವಜನಿಕರ ನಂಬಿಕೆಯನ್ನು ಕಳೆದುಕೊಂಡಿದೆ: ಪ್ರಿಯಾಂಕಾ ಗಾಂಧಿ

ಮತ್ತಷ್ಟು ದಾಖಲೆ ಸಮೇತ ಎದುರು ಬರುತ್ತೇವೆ: ಗುಡುಗಿದ ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ
Show comments