Select Your Language

Notifications

webdunia
webdunia
webdunia
webdunia

ಮೊದಲು ತ್ರಿಶುಲದಿಂದ, ನಂತರ ಕೊಡಲಿಯಿಂದ ಕೈ ಕತ್ತರಿಸಿ ಸುಟ್ಟು ಹಾಕಿದರು ಪಾಪಿಗಳು

ಮೊದಲು ತ್ರಿಶುಲದಿಂದ, ನಂತರ ಕೊಡಲಿಯಿಂದ ಕೈ ಕತ್ತರಿಸಿ ಸುಟ್ಟು ಹಾಕಿದರು ಪಾಪಿಗಳು
ಮದ್ಯಪ್ರದೇಶ , ಶನಿವಾರ, 30 ಆಗಸ್ಟ್ 2014 (15:06 IST)
ಮದ್ಯಪ್ರದೇಶ ಖಂಡವಾ ಜಿಲ್ಲೆಯಲ್ಲಿ  ನಾಲ್ಕು ಮಹಿಳೆಯರು ಸೇರಿದಂತೆ 7 ಜನರು ಕೂಡಿಕೊಂಡು  ಒಬ್ಬ ವ್ಯಕ್ತಿಯನ್ನು ಹತ್ಯೆ ಮಾಡಿದ ಪೈಶಾಚಿಕ ಕೃತ್ಯವೊಂದು ನಡೆದಿದೆ. ಈ ಕೃತ್ಯ ಮೂಡನಂಬಿಕೆಯ ಪರಮಾವಧಿ ಯಾಗಿದೆ. ಇದರಲ್ಲಿ ಕಪ್ಪು ಜಾದು ಕಲಿಯುತ್ತಿರುವ ಆದಿವಾಸಿ ಸಮೂದಾಯದ ನಾಲ್ಕು ಜರನು ಸೇರಿದಂತೆ ಒಟ್ಟು 7 ಜನರು ವ್ಯಕ್ತಿಯೊಬ್ಬನ ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡುವ ಮೊದಲು ವ್ಯಕ್ತಿಗೆ ತ್ರಿಶೂಲದಿಂದ ಇರಿದಿದ್ದಾರೆ, ನಂತರ ಕೊಡಲಿಯಿಂದ ಆತನ ಕೈ ಕತ್ತರಿಸಿದ್ದಾರೆ ಮತ್ತು ಕೊನೆಯಲ್ಲಿ ಆತನ ಮೇಲೆ ಸಿಮೇ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಎಲ್ಲಿಯವರೆಗೆ ಪೀಡಿತ ಸುಡುತ್ತಿರಲಿಲ್ಲವೋ ಅಲ್ಲಿಯವರೆಗೆ ಆರೋಪಿಗಳು ಅವನ ನಾಲ್ಕು ಕಡೆಗೆ ಸುತ್ತುವರೆದು ಕುಣಿಯಲು ಪ್ರಾರಂಭಿಸಿದ್ದಾರೆ. 
 
ಈ ಘಟನೆ ಸಾವನ್ನಪ್ಪಿದ ವ್ಯಕ್ತಿಯ ಪತ್ನಿ ಮತ್ತು ಆತನ 10 ವರ್ಷದ ಅಪ್ರಾಪ್ತ ಮಗನ ಎದುರುಗಡೆಯೇ ನಡೆದಿದೆ. ಸತ್ತ ವ್ಯಕ್ತಿ ಡಿಂಡೊರಿ ಜಿಲ್ಲೆಯ ನಿವಾಸಿಯಾಗಿದ್ದಾನೆ ಮತ್ತು ಖುದ್ದು ತಾನು ಜಾದುಗಾರ ಎಂದು ಹೇಳಿಕೊಳ್ಳುವ ವ್ಯಕ್ತಿಯಾದ ಆರೋಪಿ ಪಾವರ್ತಿ ಹತ್ತಿರ ತನ್ನ ಮಗನ ಚಿಕಿತ್ಸೆಗಾಗಿ ತೆರಳಿದ್ದ. ಬೃಜಲಾಲನಿಗೆ ಪಾರ್ವತಿ ಜಾದುಗಾರಿಕೆ ಹೇಳಿಕೊಡುತ್ತ ತನ್ನ ಅನುಯಾಯಿಗಳಿಂದ ಆತನ ಅತ್ಯೆ ಮಾಡಿಸಿದ್ದಾಳೆ ಎಂದು ಪೋಲಿಸರು ತಿಳಿಸಿದ್ದಾರೆ. 
 
ಪಾರ್ವತಿಯ ಆದೇಶ ಮೇರೆಗೆ ಕಾಪ್ಪು ಜಾದು ಕಲಿಯುತ್ತಿರುವ ಮಹಿಳೆಯರು ಸೇರಿದಂತೆ ಒಟ್ಟು ಆರು ಜನರು ಸೇರಿಕೊಂಡು ಬೃಜಲಾಲ್‌‌‌ನನ್ನು ತ್ರಿಶುಲದಿಂದ ಇರಿದಿದ್ದಾರೆ. ಇದರ ನಂತರ ಪಾರ್ವತಿ ಅವರ ಅನುಯಾಯಿಗಳನ್ನು ಕೊಡಲಿ ಬಳಸುವಂತೆ ತಿಳಿಸಿದ್ದ ನಂತರ ಅವರು ಕೊಡಲಿಯಿಂದ ಆತನ ಕೈ ಕತ್ತರಿಸಿದ್ದಾರೆ. ಬೃಜಪಾಲ ನೆಲದ ಮೇಲೆ ಬಿದ್ದು ಒದ್ದಾಡುತ್ತಿದ್ದನು,ಆಗ ಆರೋಪಿಗಳು ಆತನ ಮೇಲೆ ಸಿಮೇ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿ ಕಡಿಮೆ ಹಚ್ಚಿದ್ದಕಾರಣ ಸೀಮೆಎಣ್ಣೆಯಲ್ಲಿ ಅದ್ದಿದ ಬಟ್ಟೆಯಿಂದ ಬೆಂಕಿ ಹೆಚ್ಚಿಸಿದ್ದಾರೆ. ಬೃಜಲಾಲ ಸುಡುತ್ತಿರುವಾಗ ಆರೋಪಿಗಳು ಆತನಿಗೆ ನಾಲ್ಕು ಕಡೆಯಿಂದ ಸುತ್ತುವರೆದು ಕುಣಿಯುತ್ತ ವಿಜ್ರಂಭಣೆ ಆಚರಿಸಿದರು. 
 
ಈ ಪ್ರಕರಣದ ಕುರಿತು ದೂರು ದಾಖಲಿಸಿದರೆ ಮುಂದೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೃಜಲಾಲ್‌‌ನ ಪತ್ನಿಗೆ ಆರೋಪಿಗಳು ಬೆದರಿಕೆ ಒಡ್ಡಿದ್ದಾರೆ. ಮೃತನ ಪತ್ನಿ ಮತ್ತು ಆತನ ಮಗ ಇಡೀ ರಾತ್ರಿ ನಡೆಸುಕೊಂಡು ಸ್ಥಳೀಯ ಪೋಲಿಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೋಲಿಸರು ನಾಲ್ಕು ಜಾದುಗಾರಿಕೆ ಮಾಡುವ ಮಹಿಳೆಯರ ಸಹಿತ, ಎಲ್ಲಾ ಏಳು ಜನ ಆರೋಪಿಗಳಾದ ಪಾರ್ವತಿ, ಭಾಗವತಿ, ಕುಸಿಯಾ, ಸುರತಿಯಾ, ಮುಕೇಶ, ಹುಮಾರಿ ಸಿಂಗ್‌ ಮತ್ತು ಗೆಂದ ಸಿಂಗ್‌‌ರನ್ನು ಬಂಧಿಸಿದ್ದಾರೆ. ಪೋಲಿಸರು ಘಟನಾ ಸ್ಥಳದ ತ್ರಿಶುಲ, ಕೊಡಲಿ, ಹಾರಮೊನಿಯಂ, ಕಪ್ಪು ಜಾದುವಿನ ಪುಸ್ತಕಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಪೋಲಿಸ ಅಧಿಕಾರಿಗಳು ತಿಳಿಸಿದ್ದಾರೆ. 
 

Share this Story:

Follow Webdunia kannada