Select Your Language

Notifications

webdunia
webdunia
webdunia
webdunia

ಇನ್ಮುಂದೆ ವಾಹನ ಸವಾರರು ಪೆಟ್ರೋಲ್, ಡೀಸೆಲ್ ಖರೀದಿಸಲು ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ತೋರಿಸ್ಬೇಕು

ಇನ್ಮುಂದೆ ವಾಹನ ಸವಾರರು ಪೆಟ್ರೋಲ್, ಡೀಸೆಲ್ ಖರೀದಿಸಲು ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ತೋರಿಸ್ಬೇಕು
ನವದೆಹಲಿ , ಗುರುವಾರ, 21 ಆಗಸ್ಟ್ 2014 (15:23 IST)
ಪೆಟ್ರೋಲ್ ಪಂಪ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸುವ ವಾಹನ ಸವಾರರು ಇನ್ಮುಂದೆ ಮಾಲಿನ್ಯ ನಿಯಂತ್ರಣದಲ್ಲಿದೆ ಎನ್ನುವ ಪ್ರಮಾಣ ಪತ್ರವನ್ನು ತೋರಿಸಬೇಕಾಗುತ್ತದೆ. ವಾಹನ ಮಾಲಿನ್ಯವನ್ನು ತಡೆಯಲು ಸರಕಾರ ಇಂತಹ ನಿರ್ಧಾರ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ. 
 
ಕೇಂದ್ರದ ಮುಖ್ಯ ಕಾರ್ಯದರ್ಶಿ ಎಸ್.ಕೆ.ಶ್ರೀವಾಸ್ತವಾ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ವಾಯು ಮಾಲಿನ್ಯ ನಿಯಂತ್ರಣ ಸಭೆಯಲ್ಲಿ, ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಾಯುಮಾಲಿನ್ಯ ನಿಯಂತ್ರಣ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.  
 
ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ತಜ್ಞರು ನೀಡಿದ ಶಿಫಾರಸ್ಸುಗಳನ್ನು ಕೇಂದ್ರ ಸರಕಾರ ಈಗಾಗಲೇ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಶ್ರೀ ವಾಸ್ತವಾ ತಿಳಿಸಿದ್ದಾರೆ.  
 
ಮಾಲಿನ್ಯ ನಿಯಂತ್ರಣಕ್ಕಾಗಿ ಜಾರಿಗೊಳಿಸಿದ ನಿಯಮಗಳು ಅನುಷ್ಠಾನಕ್ಕೆ ತರಲು ಕೆಲವು ತಿಂಗಳುಗಳಾಗಬಹುದು.ತೇಂದ್ರ ಸರಕಾರ ವಾಯುಮಾಲಿನ್ಯ ನಿಯಮಗಳ ಬಗ್ಗೆ ಪ್ರಚಾರ ಕಾರ್ಯಗಳಿಂದ ಜನತೆಯ ಮನವೊಲಿಸಿ ಅವರೇ ವಾಯುಮಾಲಿನ್ಯ ನಿಯಮಗಳನ್ನು ಪಾಲಿಸುವಂತಾಗಬೇಕು ಎಂದು ಕೇಂದ್ರದ ಮುಖ್ಯ ಕಾರ್ಯದರ್ಶಿ ಎಸ್.ಕೆ.ಶ್ರೀವಾಸ್ತವಾ ವಿವರಿಸಿದ್ದಾರೆ.      
 
 
 

Share this Story:

Follow Webdunia kannada