ಟ್ವಿಟರ್ ಖಾತೆ ಸ್ಥಗಿತಗೊಳಿಸಿದ ಸೋನು ನಿಗಮ್

Webdunia
ಗುರುವಾರ, 25 ಮೇ 2017 (10:11 IST)
ಮುಂಬೈ: ಟ್ವಿಟರ್‌ ‘ಏಕಪಕ್ಷೀಯ’ವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿರುವ ಖ್ಯಾತ ಗಾಯಕ ಸೋನು ನಿಗಮ್‌, ತಮ್ಮ ಟ್ವಿಟರ್‌ ಖಾತೆಯನ್ನು ಸ್ಥಗಿತಗೊಳಿಸಿದ್ದಾರೆ.
 
ಟ್ವಿಟರ್‌ಗೆ ವಿದಾಯ ಹೇಳುವುದಕ್ಕೂ ಮುನ್ನ ಅವರು 24 ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ಮಹಿಳೆಯರ ಕುರಿತಾಗಿ ಅವಾಚ್ಯವಾಗಿ ಟ್ವೀಟ್‌ ಮಾಡಿದ ಬಾಲಿವುಡ್‌ ಗಾಯಕ ಅಭಿಜಿತ್‌ ಭಟ್ಟಾಚಾರ್ಯ ಅವರ ಖಾತೆಯನ್ನು ಟ್ವಿಟರ್‌ ಅಮಾನತು ಮಾಡಿದ ನಂತರ ಸೋನು ನಿಗಮ್‌ ಈ ನಿರ್ಧಾರ ಕೈಗೊಂಡಿದ್ದಾರೆ. 
 
ಜವಾಹರಲಾಲ್‌ ನೆಹರೂ ವಿವಿಯ (ಜೆಎನ್‌ಯು) ವಿದ್ಯಾರ್ಥಿ ಸಂಘಟನೆಯ ನಾಯಕಿ ಶೆಹ್ಲಾ ರಶೀದ್‌ ವಿರುದ್ಧ ಗಾಯಕ ಅಭಿಜಿತ್‌ ಮಾಡಿರುವ ಟ್ವೀಟ್‌ ಅನ್ನು ನಿಗಮ್‌ ಸಮರ್ಥಿಸಿದ್ದಾರೆ. ಅಭಿಜಿತ್‌ ಅವರು ಬಳಸಿದ ಭಾಷೆಯನ್ನು ಆಕ್ಷೇಪಿಸಬಹುದು. ಆದರೆ, ಬಿಜೆಪಿ ಲೈಂಗಿಕ ಜಾಲ ನಡೆಸುತ್ತಿದೆ ಎಂದು ಶೆಹ್ಲಾ ಮಾಡಿರುವ ಆರೋಪ ಪ್ರಚೋದನಾಕಾರಿಯಲ್ಲವೇ’ ಎಂದು ಅವರು ಪ್ರಶ್ನಿಸಿದ್ದಾರೆ. 
 
ಒಂದು ವೇಳೆ, ಅಭಿಜಿತ್‌ ಅವರ ಖಾತೆಯನ್ನು ಸ್ಥಗಿತಗೊಳಿಸುತ್ತಾರೆ ಎಂದಾದರೆ, ಶೆಹ್ಲಾ ಅವರ ಖಾತೆ ಮತ್ತು ಪ್ರತೀ ಸಾಧಕರನ್ನು ತಾಯಿ, ಸಹೋದರಿಯರ ಹೆಸರು ಹೇಳಿ ನಿಂದಿಸುವವರ ಖಾತೆಗಳನ್ನು ಯಾಕೆ ರದ್ದು ಮಾಡಬಾರದು ಎಂದು ಪ್ರಶ್ನಿಸಿದ್ದಾರೆ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗ್ಯಾರಂಟಿ ಹೊರೆ ಅಂತ ಡಿಕೆಶಿಗೆ ಅನಿಸಿರಬಹುದು, ಶ್ರೀಮಂತರು ತೆಗೆದುಕೊಳ್ಳಲ್ಲ ಅಂದ್ಕೊಂಡಿದ್ವಿ: ಪರಮೇಶ್ವರ್

ಟ್ರಿಪ್ ಗೆ ಪ್ಲ್ಯಾನ್ ಮಾಡಿದ್ದಾಗಲೇ ಬಾಸ್ ರಜೆ ಕ್ಯಾನ್ಸಲ್ ಮಾಡಿದ್ರು: ಯುವತಿ ಮಾಡಿದ್ದೇನು Viral video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಪವಿತ್ರ ಗಂಗಾ ನದಿ ಹಾಳು ಮಾಡಲು ಇಂಥವರು ಇದ್ರೆ ಸಾಕು: Video

ಪ್ರಧಾನಿ ಮೋದಿಗಾಗಿ ಭಾರತಿಯ ಉಡುಗೆ ತೊಟ್ಟ ಇಸ್ರೇಲ್ ಪ್ರಧಾನಿ ನೆತನ್ಯಾಹು: ವಿಡಿಯೋ

ಮುಂದಿನ ಸುದ್ದಿ