Webdunia - Bharat's app for daily news and videos

Install App

ಸೋನಿಯಾ ಗಾಂಧಿ ಆರೋಗ್ಯದಲ್ಲಿ ನಿಧಾನಗತಿಯ ಚೇತರಿಕೆ: ಕಾಂಗ್ರೆಸ್

Webdunia
ಬುಧವಾರ, 3 ಆಗಸ್ಟ್ 2016 (14:16 IST)
ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಆರೋಗ್ಯ ಸ್ಥಿರವಾಗಿದ್ದು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
 
ಸೋನಿಯಾ ಗಾಂಧಿಯವರ ಆರೋಗ್ಯದ ಬಗ್ಗೆ ಆಸ್ಪತ್ರೆಯ ಅಡಳಿತ ಮಂಡಳಿ ಯಾವುದೇ ಪ್ರಕಟಣೆ ಹೊರಡಿಸಿಲ್ಲವಾದರೂ, ಸೋನಿಯಾ ಆರೋಗ್ಯವಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ತಿಳಿಸಿದ್ದಾರೆ.
 
ವಾರಣಾಸಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದ ಸೋನಿಯಾ, ನಂತರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ನಿನ್ನೆ ರಾತ್ರಿ ನವದೆಹಲಿಗೆ ಆಗಮಿಸಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
 
ವಾರಣಾಸಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ 8 ಕಿ.ಮೀ ರೋಡ್‌ಶೋ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಆರೋಗ್ಯ ಸಮಸ್ಯೆ ಎದುರಾಗಿತ್ತು. ನಂತರ ರೋಡ್‌ಶೋ ಕಾರ್ಯಕ್ರಮವನ್ನು ಅರ್ಧದಲ್ಲಿಯೇ ಕೈ ಬಿಟ್ಟು ಚಾರ್ಟರ್ಡ್ ವಿಮಾನದ ಮೂಲಕ ದೆಹಲಿಗೆ ವಾಪಸಾಗಿದ್ದರು.
 
ಕಾಶಿ ವಿಶ್ವನಾಥ್ ದೇವಾಲಯದ ದರ್ಶನಕ್ಕೆ ತೆರಳಲು ಬಯಸಿದ್ದ ಸೋನಿಯಾ ಗಾಂಧಿ, ಅನಾರೋಗ್ಯದಿಂದಾಗಿ ದೇವಾಲಯಕ್ಕೆ ತೆರಳಲು ಸಾಧ್ಯವಾಗಿಲ್ಲ. ಮತ್ತೊಮ್ಮೆ ವಾರಣಾಸಿಗೆ ಬಂದು ಕಾಶಿ ವಿಶ್ವನಾಥನ ದರ್ಶನ ಮಾಡುವುದಾಗಿ ಸೋನಿಯಾ ತಿಳಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Mock Drill: ಯಾವ ರಾಜ್ಯದಲ್ಲಿ ಎಲ್ಲೆಲ್ಲಿ ಇರಲಿದೆ ಮಾಕ್ ಡ್ರಿಲ್: ಇಲ್ಲಿದೆ ಕಂಪ್ಲೀಟ್ ಲಿಸ್ಟ್

Mangaluru Suhas Shetty murder: ಮಂಗಳೂರಿನಲ್ಲೀಗ ಹೈ ಅಲರ್ಟ್: ರಾತ್ರಿ 9 ರ ಮೇಲೆ ಎಲ್ಲಾ ಕ್ಲೋಸ್

Arecanut price today: ಅಡಿಕೆ ಬೆಳೆಗಾರರಿಗೆ ಇಂದು ಗುಡ್ ನ್ಯೂಸ್, ಇಂದಿನ ದರ ಎಷ್ಟಾಗಿದೆ ನೋಡಿ

Gold Price Today: ಮತ್ತೆ ಶಾಕ್ ಆಗುವಂತಿದೆ ಚಿನ್ನದ ದರ, ಇಂದು ಎಷ್ಟಾಗಿದೆ ನೋಡಿ

India Pakistan: ಭಾರತ ಯುದ್ಧವೇ ಮಾಡಿಲ್ಲ, ಆಗಲೇ ನಮ್ಮ ಸಪೋರ್ಟ್ ಪಾಕಿಸ್ತಾನಕ್ಕೆ ಎಂದ ಚೀನಾ

ಮುಂದಿನ ಸುದ್ದಿ
Show comments