Select Your Language

Notifications

webdunia
webdunia
webdunia
webdunia

ಅಸ್ವಸ್ಥರಾಗಿರುವ ಸೋನಿಯಾ ಗಾಂಧಿ

ಅಸ್ವಸ್ಥರಾಗಿರುವ ಸೋನಿಯಾ ಗಾಂಧಿ
ನವದೆಹಲಿ , ಬುಧವಾರ, 11 ಮಾರ್ಚ್ 2015 (15:21 IST)
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಸ್ವಸ್ಥರಾಗಿದ್ದಾರೆ. ವೈರಲ್ ಫಿವರ್‌ನಿಂದ ಬಳಲುತ್ತಿರುವ ಅವರು ಇಂದು ಸಂಸತ್ತಿನ ಕಲಾಪಗಳಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಪಕ್ಷದ ಮೂಲಗಳು ತಿಳಿಸಿವೆ.
 
ನಿನ್ನೆ ಸಹ ಅವರು ಸಂಸತ್ತಿಗೆ ಹಾಜರಾಗಿರಲಿಲ್ಲ. ಈ ಕುರಿತು ಪಕ್ಷ ಮಂಗಳವಾರ ರಾತ್ರಿ ಸ್ಪಷ್ಟನೆ ನೀಡಿತ್ತು. ಸೋನಿಯಾರವರು ಜ್ವರದಿಂದ ಬಳಲುತ್ತಿರುವ ಕಾರಣ ಕಲಾಪದಲ್ಲಿ ಉಪಸ್ಥಿತರಿರಲಿಲ್ಲ ಎಂದು ಹೇಳಿಕೆ ನೀಡಿದ್ದ ಪಕ್ಷ ಅವರ ಆರೋಗ್ಯದಲ್ಲಿ ಸುಧಾರಣೆಯಾಗದ ಕಾರಣ ಇಂದು ಸಹ ಅವರು ಸಂಸತ್ತಿಗೆ ಬರಲಾರರು ಎಂದು ತಿಳಿಸಿದೆ. 
 
ಸೋನಿಯಾ ಪುತ್ರ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಹ ಹಲವು ದಿನಗಳಿಂದ ರಜೆಯ ಮೇಲಿದ್ದು, ಸಂಸತ್ ಅಧಿವೇಶನ ನಡೆಯುವ ಸಂದರ್ಭದಲ್ಲಿ ಅವರು ಗೈರು ಹಾಜರಾಗಿರುವುದು ವಿರೋಧ ಪಕ್ಷಗಳಿಂದ ತೀವೃ ಟೀಕೆಗೆ ಗುರಿಯಾಗಿದೆ.

Share this Story:

Follow Webdunia kannada