Webdunia - Bharat's app for daily news and videos

Install App

ಸೋನಿಯಾ ಗಾಂಧಿ ಶೌಚಾಲಯ ತೊಳೆಯುತ್ತಿರುವ ಚಿತ್ರ ಪ್ರಕಟ: ಹಿಂಸಾಚಾರದಲ್ಲಿ ಒಬ್ಬನ ಸಾವು

Webdunia
ಗುರುವಾರ, 16 ಜೂನ್ 2016 (19:06 IST)
ವಾಟ್ಸಪ್‌ ಮ್ಯಾಸೆಂಜರ್ ಗ್ರೂಪ್‌ನಲ್ಲಿ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿಯವರ ಆಕ್ಷೇಪಾರ್ಯ ಚಿತ್ರ ಹರಿದುಬಂದಿದ್ದರಿಂದ, ಆಕ್ರೋಶಗೊಂಡ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು 33 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಹತ್ಯೆಯಾಗಿದ್ದಲ್ಲದೇ ಆರು ಜನ  ಗಂಬೀರವಾಗಿ ಗಾಯಗೊಂಡಿದ್ದಾರೆ. 
 
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾರ, ಉಮೇಶ್ ವರ್ಮಾ ಎಂಬಾತನಿಗೆ ಘರ್ಷಣೆಯಲ್ಲಿ ಗಂಭೀರವಾಗಿ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿಸಿದ್ದಾರೆ.
 
ಕಾಂಗ್ರೆಸ್ ಕಾರ್ಪೋರೇಟರ್ ಜತಿನ್ ರಾಜ್ ಮಾತನಾಡಿ, ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ, ವಿರೋಧಿಗಳ ಗುಂಪು ಪೊಲೀಸ್ ಠಾಣೆಯಲ್ಲಿಯೇ ಹಲ್ಲೆ ಮಾಡಿದೆ ಎಂದು ಆರೋಪಿಸಿದ್ದಾರೆ.ಆದರೆ, ಬೇರೆ ಬೇರೆ ಪೊಲೀಸ್ ಠಾಣೆಗಳಿಂದ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕರೆತರಿಸಲು ಪ್ರಯತ್ನಿಸಲಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 
ಜತಿನ್ ರಾಜ್, ಸ್ಥಳೀಯರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲು ವಿಜಯ್ ನಗರ್ ಫ್ರೆಂಡ್ಸ್ ಎಂದು ವಾಟ್ಸಪ್‌ನಲ್ಲಿ ಗ್ರೂಪ್ ತೆರೆದಿದ್ದರು. 
 
ಪ್ರಶಾಂತ್ ನಾಯಕ್ ಎನ್ನುವ ವ್ಯಕ್ತಿ ಜತಿನ್ ರಾಜ್ ವಾಟ್ಸಪ್‌ಗೆ ಸೋನಿಯಾ ಗಾಂಧಿ ಶೌಚಾಲಯ ತೊಳೆಯುತ್ತಿರುವ ಫೋಟೋ ಪೋಸ್ಟ್ ಮಾಡಿ, ಮೋದಿ, ಕಾಂಗ್ರೆಸ್ ಅಧ್ಯಕ್ಷೆಯನ್ನು ಯಾವ ಹಂತಕ್ಕೆ ತಂದಿಳಿಸಿದ್ದಾರೆ ಎಂದು ಅವಹೇಳನಕಾರಿ ಸಂದೇಶ ಪೋಸ್ಟ್ ಮಾಡಿದ್ದನು ಎನ್ನಲಾಗಿದೆ. 
 
ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಪೋರೇಟರ್ ಜತಿನ್ ರಾಜ್, ತನ್ನ ಬೆಂಬಲಿಗರೊಂದಿಗೆ ಪ್ರಶಾಂತ್ ನಾಯಕ್ ಮೇಲೆ ದಾಳಿ ಮಾಡಿದಾಗ ಎರಡು ಗುಂಪುಗಳು ನಡುವೆ ವಾಗ್ವಾದ ವಿಕೋಪಕ್ಕೆ ತೆರಳಿ ಘರ್ಷಣೆ ನಡೆದು ಹಿಂಸಾಚಾರಕ್ಕೆ ಕಾರಣವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೈಸೂರಿಗೆ ಬೀಗರೂಟಕ್ಕೆ ಬರಕ್ಕಾಗುತ್ತೆ, ಸಿಗಂದೂರಿಗೆ ಬರಕ್ಕಾಗಲ್ವಾ: ಸಿಎಂಗೆ ಪ್ರತಾಪ್ ಸಿಂಹ ಗುದ್ದು

ನಿಮಿಷಾ ಪ್ರಿಯಾಗೆ ಕ್ಷಮೆಯೇ ಇಲ್ಲ, ಪರಿಹಾರ ಹಣವೂ ಬೇಡ ಎಂದ ಯೆಮನ್ ಕುಟುಂಬ

Arecanut price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

40 ವರ್ಷ ಮೇಲ್ಪಟ್ಟವರು ಹೃದಯಾಘಾತವಾಗದಂತೆ ಈ ಟಿಪ್ಸ್ ಪಾಲಿಸಿ: ಡಾ ದೇವಿಪ್ರಸಾದ್ ಶೆಟ್ಟಿ

ಮುಂದಿನ ಸುದ್ದಿ
Show comments