Select Your Language

Notifications

webdunia
webdunia
webdunia
webdunia

ಅಧಿಕಾರಕ್ಕಾಗಿ ಬಿಜೆಪಿ ಯಾವ ಹಂತಕ್ಕೂ ಹೋಗಲು ಸಿದ್ಧ: ಸೋನಿಯಾ ಗಾಂಧಿ

ಅಧಿಕಾರಕ್ಕಾಗಿ ಬಿಜೆಪಿ ಯಾವ ಹಂತಕ್ಕೂ ಹೋಗಲು ಸಿದ್ಧ: ಸೋನಿಯಾ ಗಾಂಧಿ
ಡಾಲ್ಟನ್‌ಗಂಜ್‌ , ಭಾನುವಾರ, 23 ನವೆಂಬರ್ 2014 (13:28 IST)
ಜಾರ್ಖಂಡ್‌ನಲ್ಲಿ ನಕ್ಸಲ್‌ರ ಹಾವಳಿ ಹೆಚ್ಚುತ್ತಿದ್ದು, ಅದರ ಕಡೆ ಗಮನ ನೀಡದ ಸರಕಾರ ಭೃಷ್ಟಾಚಾರದಲ್ಲಿ ನಿರತವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಿಡಿಕಾರಿದ್ದಾರೆ. 

ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು ಪ್ರಮುಖ ಪಕ್ಷಗಳು ಅಬ್ಬರದ ಚುನಾವಣಾ ಪ್ರಚಾರದಲ್ಲಿ ನಿರತವಾಗಿವೆ. ಡಾಲ್ಟನ್‌ಗಂಜ್‌ನಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪ್ರಚಾರ ಸಭೆ ನಡೆಸುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ಮೋದಿ ಮತ್ತು ಕೇಂದ್ರ ಸರಕಾರದ ವಿರುದ್ಧ ಬಿರುಸಿನ ವಾಗ್ದಾಳಿ ನಡೆಸಿದ್ದಾರೆ.
 
ಅಧಿಕಾರಕ್ಕಾಗಿ ಬಿಜೆಪಿ ಯಾವ ಹಂತಕ್ಕೂ ಇಳಿಯಲು ಸಿದ್ಧ ಎಂದಿರುವ ಅವರು ಗದ್ದುಗೆ ಆಶೆಗಾಗಿ  ಬಿಜೆಪಿ ಪಕ್ಷ ಹಲವು ಭರವಸೆಗಳನ್ನು ನೀಡಿತ್ತು. ಆದರೆ ಅವೆಲ್ಲವೂ ಸುಳ್ಳೆಂದು ಸಾಬೀತಾಗಿದೆ. ಪ್ರಧಾನಿ ಮೋದಿ ಕೇವಲ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾರೆ. ಆದರೆ ಅವುಗಳ ಸಾಕಾರ ಮಾತ್ರ ಕನಸಿನ ಮಾತು ಎಂದು ಅವರು ಆಪಾದಿಸಿದ್ದಾರೆ. 
 
ಜಾರ್ಖಂಡ್‌ನ 22 ಜಿಲ್ಲೆಗಳಲ್ಲಿ ನಕ್ಸಲರ ಹಾವಳಿ  ತೀವೃವಾಗಿದೆ. ಆದರೆ ಬಿಜೆಪಿ ಸರಕಾರ ಇದನ್ನು ಹತ್ತಿಕ್ಕುವ ದಿಶೆಯಲ್ಲಿ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಅವರು ಇಲ್ಲಿನ ಯುವಕರಿಗೆ ಉದ್ಯೋಗವಿಲ್ಲ. ಅವರಿಗೆ ರೋಜಗಾರ್ ಯೋಜನೆ ಲಾಭ ದೊರೆಯುತ್ತಿಲ್ಲ ಎಂದು ಸೋನಿಯಾ ಬೇಸರ ವ್ಯಕ್ತ ಪಡಿಸಿದ್ದಾರೆ.
 
ಬಿಜೆಪಿ ಆಡಳಿತದಲ್ಲಿ ಭೃಷ್ಟಾಚಾರ ಅಪರಾಧಗಳು ಹೆಚ್ಚಾಗಿವೆ. ನಾವು ಬಡವರಿಗಾಗಿ ಹೋರಾಟ ಮಾಡಿದ್ದೇವೆ, ಮಾಡುತ್ತಿರುತ್ತೇವೆ. 
ಯುಪಿಎ ಸರಕಾರದ ಅವಧಿಯಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದೆವು. ಆದರೆ ಬಿಜೆಪಿ ಸರಕಾರ ಅದನ್ನು ಅನುಷ್ಠಾನಕ್ಕೆ ತರದೇ ನಿರ್ಲಕ್ಷಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
 
ಜಾರ್ಖಂಡ್‌ನಲ್ಲಿ ನವೆಂಬರ್ 25 ರಂದು ವಿಧಾನ ಸಭಾ ಚುನಾವಣೆ ನಡೆಯಲಿದೆ. 

Share this Story:

Follow Webdunia kannada