ಹೈದರಾಬಾದ್: ವಾಷಿಂಗ್ಟನ್‌ನಲ್ಲಿ ಅಪರಿಚಿತ ದುಷ್ಕರ್ಮಿಗಳ ಗುಂಡೇಟಿಗೆ ತೆಲಂಗಾಣ ಮೂಲದ 26ವರ್ಷದ ವಿದ್ಯಾರ್ಥಿ ಬಲಿಯಾಗಿದ್ದಾನೆ.
ಹೈದರಾಬಾದ್‌ನ 26 ವರ್ಷದ ವಿದ್ಯಾರ್ಥಿ ರವಿತೇಜ ಸಾವಿನ ಸುದ್ದಿ ತಿಳಿದು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ರವಿತೇಜ ಚಂದ್ರಮೌಳಿ ಪ್ರತಿಕ್ರಿಯಿಸಿ,, ಆತ ಅಮೆರಿಕಾಕ್ಕೆ ಅನೇಕ ಕನಸುಗಳೊಂದಿಗೆ ಹೋದ. ಆದರೆ ಶವವಾಗಿ ವಾಪಾಸ್ಸಾಗುತ್ತಾನೆಂದು ನಾವು ಊಹಿಸಿರಲಿಲ್ಲ. ಈ ದುಃಖವನ್ನು ನಾನು ಹೇಗೆ ಸಹಿಸಲಿ ಎಂದು ಕಣ್ಣೀರು ಹಾಕಿದರು.
ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದರಿಂದ ರವಿತೇಜ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಕುಟುಂಬಕ್ಕೆ ಲಭಿಸಿದೆ. ಘಟನೆ ಯಾವಾಗ ಮತ್ತು ಯಾವ ಸಮಯದಲ್ಲಿ ನಡೆದಿದೆ ಎಂಬ ನಿಖರ ಮಾಹಿತಿ ಅವರ ಬಳಿ ಇಲ್ಲ. ರವಿತೇಜ ತಮ್ಮ ಸ್ನಾತಕೋತ್ತರ ವ್ಯಾಸಂಗ ಮಾಡಲು ಅಮೆರಿಕಕ್ಕೆ ತೆರಳಿದ್ದರು.
ಅವನು ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಅವನು ಕೆಲಸದ ಹುಡುಕಾಟದಲ್ಲಿದ್ದನು. ಗುಂಡಿನ ಘಟನೆಯು ಗ್ಯಾಸ್ ಸ್ಟೇಷನ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ.<>