Select Your Language

Notifications

webdunia
webdunia
webdunia
webdunia

ನವಜೋತ್ ಸಿಂಗ್ ಸಿದ್ದು ಐಷಾರಾಮಿ ನಿವಾಸದ ಮೌಲ್ಯ 25 ಕೋಟಿಗೂ ಹೆಚ್ಚು

ನವಜೋತ್ ಸಿಂಗ್ ಸಿದ್ದು ಐಷಾರಾಮಿ ನಿವಾಸದ ಮೌಲ್ಯ 25 ಕೋಟಿಗೂ ಹೆಚ್ಚು
ಅಮೃತ್‌ಸರ್ , ಶುಕ್ರವಾರ, 21 ಅಕ್ಟೋಬರ್ 2016 (15:04 IST)
ಮಾಜಿ ಕ್ರಿಕೆಟಿಗ ರಾಜಕಾರಣಿ ನವಜೋತ್ ಸಿಂಗ್ ಸಿದ್ದು, ಇತ್ತೀಚೆಗೆ ತಮ್ಮ 25 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬಂಗಲೆಯಲ್ಲಿ 53ನೇ ಜನ್ಮದಿನಾಚರಣೆಯನ್ನು ಆತ್ಮಿಯ ಗೆಳ.ರು ಸಂಬಂಧಿಕರೊಂದಿಗೆ ಆಚರಿಸಿಕೊಂಡಿದ್ದಾರೆ. 
 
ನವಜೋತ್ ಸಿಂಗ್ ಸಿದ್ದು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ ಕ್ರಿಕೆಟ್ ಕಾಮೆಂಟ್ರಿ ಮತ್ತು ಟಿವಿ ಶೋಗಳಿಂದ ಅಪಾರ ಹಣವನ್ನು ಸಂಪಾದಿಸಿದ್ದಾರೆ. ಅದರಲ್ಲಿ ಹೆಚ್ಚಿನ ಹಣವನ್ನು ಅಮೃತಸರ್‌ದಲ್ಲಿರುವ ಮನೆಯ ಸಿಂಗಾರಕ್ಕಾಗಿ ವೆಚ್ಚ ಮಾಡಿದ್ದಾರೆ ಎನ್ನಲಾಗಿದೆ.  
 
ಸಿದ್ದು ಐಷಾರಾಮಿ ಮನೆಯಲ್ಲಿ ಕೇವಲ ಈಜುಕೋಳವಿಲ್ಲ. ಬದಲಿಗೆ ಜಿಮ್ ಸ್ಪಾ ಪ್ರತ್ಯೇಕ ಕೋಣೆಗಳಿದ್ದು, ಇಂಟಿರಿಯರ್ ಡೆಕೋರೇಶನ್ ಕೂಡಾ ಅದ್ಭತವಾಗಿ ಮಾಡಲಾಗಿದೆ. ಮನೆಯ ಹೊರ ಆವರಣದಲ್ಲಿ 600 ವರ್ಷಗಳಿಗೂ ಹಳೆಯದಾದ ಗಿಡಗಳನ್ನು ಬೆಳೆಸಿದ್ದಾರೆ. ಚೆನ್ನೈ, ಬೆಂಗಳೂರು ಮತ್ತು ಗೋವಾದಿಂದ ಗಿಡಗಳನ್ನು ಖರೀದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.  
webdunia
ಕಳೆದ 2014 ರಲ್ಲಿ ಐಷಾರಾಮಿ ಮನೆಗೆ ತೆರಳಿದ ನವಜೋತ್ ಸಿಂಗ್, ಮನೆಯ ಒಟ್ಟು ಮೌಲ್ಯ 25 ಕೋಟಿ ರೂ.ಗಳಿಗೂ ಹೆಚ್ಚು ಎನ್ನಲಾಗಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಭಾರತೀಯ ಟಿವಿ, ರೇಡಿಯೋ ಮೇಲೆ ಪಾಕ್ ನಿರ್ಬಂಧ ದುರದೃಷ್ಟಕರ