Select Your Language

Notifications

webdunia
webdunia
webdunia
webdunia

ಅಪಹರಣಕಾರರು ಒಳ್ಳೆಯವರು, ದೂರು ನೀಡಲಾರೆ ಎಂದ ಸ್ನಾಪ್‌ಡೀಲ್ ಉದ್ಯೋಗಿ

ಅಪಹರಣಕಾರರು ಒಳ್ಳೆಯವರು, ದೂರು ನೀಡಲಾರೆ ಎಂದ ಸ್ನಾಪ್‌ಡೀಲ್ ಉದ್ಯೋಗಿ
ಗಾಜಿಯಾಬಾದ್ , ಶನಿವಾರ, 13 ಫೆಬ್ರವರಿ 2016 (12:36 IST)
ಎರಡು ದಿನಗಳ ಕಾಲ ನಾಪತ್ತೆಯಾಗಿ ಸುರಕ್ಷಿತವಾಗಿ ಮರಳಿರುವ ಸ್ನಾಪ್‌ಡೀಲ್ ಉದ್ಯೋಗಿ ದಿಪ್ತಿ ಸರ್ನಾ ಅಪಹರಣಕಾರರ ವಿರುದ್ಧ ದೂರು ನೀಡಲು ನಿರಾಕರಿಸಿದ್ದಾರೆ. ಅದಕ್ಕೆ ಅವರು ನೀಡಿರುವ ಕಾರಣವನ್ನು ಕೇಳಿ ಪೊಲೀಸರೇ ದಂಗಾಗಿ ಹೋಗಿದ್ದಾರೆ. ಅದೇನಂತಿರಾ? ಮುಂದೆ ಓದಿ. 

'ನನ್ನನ್ನು ಅಪಹರಿಸಿದವರು ತುಂಬಾ ಒಳ್ಳೆಯವರು, ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು. ಸಮಯಕ್ಕೆ ಸರಿಯಾಗಿ ಊಟ ಕೊಟ್ಟರು. ಅವರ ವಿರುದ್ಧ ದೂರು ನೀಡಲಾರೆ ಎಂದಿದ್ದಾರೆ ದಿಪ್ತಿ.
 
ನಾಲ್ವರು ಯುವಕರು ತಮ್ಮ ಗುರುತು ಪತ್ತೆ ಹಚ್ಚದಿರಲು ನನ್ನ ಕಣ್ಣಿಗೆ ಬಟ್ಟೆ ಕಟ್ಟಿ ಅಪಹರಿಸಿದ್ದರು. ಆದರೆ, ಯಾವುದೇ ರೀತಿಯ ದೈಹಿಕ ಹಲ್ಲೆ ಮಾಡಿಲ್ಲ ಎಂದು ದಿಪ್ತಿ ಸ್ಪಷ್ಟಪಡಿಸಿದ್ದಾರೆ.
 
24 ರ  ದಿಪ್ತಿ ಸ್ನ್ಯಾಪ್‌ಡೀಲ್‌ ಶಾಪಿಂಗ್ ವೆಬ್‌ಸೈಟ್‌ನಲ್ಲಿ ಉದ್ಯೋಗಿಯಾಗಿದ್ದಾಳೆ. ಗುರ್ಗಾಂವ್‌ನಿಂದ ತನ್ನ ಮನೆಯಿರುವ ಗಾಜಿಯಾಬಾದ್‌ಗೆ ತೆರಳುತ್ತಿರುವ ಸಂದರ್ಭದಲ್ಲಿ ನಾಲ್ವರು ಆರೋಪಿಗಳು ಆಕೆಯನ್ನು ಅಪಹರಿಸಿದ್ದರು ಎಂದು ಹೇಳಲಾಗುತ್ತಿದೆ. 36 ಗಂಟೆಗಳ ನಂತರ ಆಕೆ ಪೋಷಕರಿಗೆ ಕರೆ ಮಾಡಿ ಸುರಕ್ಷಿತವಾಗಿರುವುದಾಗಿ ಮಾಹಿತಿ ನೀಡಿದ್ದಳು.
 
ಆಕೆಯನ್ನು ಅಪಹರಿಸಿದ ಜಾಗದಲ್ಲೇ ಮರಳಿ ಬಿಡಲಾಯಿತು ಎಂದು ಆಕೆಯ ತಂದೆ ತಿಳಿಸಿದ್ದಾರೆ
 
ಆಕೆ ನಾಪತ್ತೆಯಾಗಿದ್ದ ಎರಡು ದಿನ ಏನು ನಡೆಯಿತು ಎಂಬುದು ಇನ್ನು ಅಸ್ಪಷ್ಟವಾಗಿದ್ದು , ಆಕೆಯನ್ನು ಮತ್ತೆ ವಿಚಾರಣೆಗೊಳಪಡಿಸಲಾಗುವುದು. ಅಪಹರಣಕಾರರು ಈ ವೃತ್ತಿಗೆ ಹೊಸಬರಾಗಿರಬೇಕು. ಭಯದಿಂದ ಆಕೆಯನ್ನು ಚೆನ್ನಾಗಿ ನೋಡಿಕೊಂಡು ಸುರಕ್ಷಿತವಾಗಿ ಮರಳಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. 

Share this Story:

Follow Webdunia kannada