Select Your Language

Notifications

webdunia
webdunia
webdunia
webdunia

ಸ್ನೇಕ್ ಗ್ಯಾಂಗ್ : ಹಾವಿನಿಂದ ಕಚ್ಚಿಸುವುದಾಗಿ ಹೆದರಿಸಿ ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ತಂಡ

ಸ್ನೇಕ್ ಗ್ಯಾಂಗ್ : ಹಾವಿನಿಂದ ಕಚ್ಚಿಸುವುದಾಗಿ ಹೆದರಿಸಿ ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ತಂಡ
ಹೈದ್ರಾಬಾದ್‌ , ಸೋಮವಾರ, 1 ಸೆಪ್ಟಂಬರ್ 2014 (13:51 IST)
ಮಾರಕಾಸ್ತ್ರಗಳನ್ನು ತೋರಿಸಿ ದೋಚುವ, ಅತ್ಯಾಚಾರ ನಡೆಸುವ, ಕುಡಿಯಲು ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಅತ್ಯಾಚಾರವೆಸಗುತ್ತಿದ್ದ ದಂಡುಪಾಳ್ಯ ಗ್ಯಾಂಗ್‌ನಂಥ ಪ್ರಕರಣಗಳು ಗೊತ್ತು. ಆದರೆ ಹಾವುಗಳನ್ನು ತೋರಿಸಿ ಬೆದರಿಸುವ ಮೂಲಕ ಮಹಿಳೆಯರ ಮೇಲೆ ಅತ್ಯಾಚಾರವೆಸಗುವ ಭೀಕರ ತಂಡವೊಂದು ಆಂಧ್ರಪ್ರದೇಶದಲ್ಲಿ ತಲೆ ಎತ್ತಿದ್ದು, ಜನ ಸಾಮಾನ್ಯರಲ್ಲಿ ಭಾರೀ ಆತಂಕ ಹುಟ್ಟಿಸಿದೆ. 
 
ಈ ಗ್ಯಾಂಗ್‌ ಕೇವಲ ಹಾವು ತೋರಿಸಿ ಅತ್ಯಾ ಚಾರ ಮಾಡುವುದು ಮಾತ್ರವಲ್ಲ, ದರೋಡೆ, ಭೂ ಕಬಳಿಕೆಯಂಥ ಕೃತ್ಯಗಳಿಗೂ ವಿಷಕಾರಿ ಹಾವು ಗಳನ್ನು ಬಳಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗೆ ಈ ಗ್ಯಾಂಗ್‌ನ ಕೆಲ ಪಾತಕಿಗಳು ಪೊಲೀಸರ ಬಲೆಗೆ ಬಿದ್ದ ಮೇಲೆ, ಹೀಗೆ ಸ್ನೇಕ್‌ ಗ್ಯಾಂಗ್‌ನ ಭೀತಿಗೆ ಹೆದರಿ ಅತ್ಯಾಚಾರಕ್ಕೆ ಒಳಗಾದ ಹಲವು ಪ್ರಕರಣಗಳು ಒಂದಾದ ಮೇಲೊಂದರಂತೆ ಹೊರಬರುತ್ತಿದೆ. 
 
ಸಿಕ್ಕಿಬಿದ್ದ ಖದೀಮರು: ಹೈದ್ರಾಬಾದ್‌ನ ಪಹಾಡಿ ಷರೀಫ್ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ 18 ವರ್ಷದ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ತೋಟದ ಮನೆಯೊಂದರಲ್ಲಿ ಬಾಲಕಿ ತನ್ನ ಪ್ರಿಯಕರನ ಜೊತೆಗೆ ಇದ್ದ ವೇಳೆ ಅಲ್ಲಿಗೆ ನುಗ್ಗಿದ್ದ 8 ಜನರ ಗುಂಪು, ಇಬ್ಬರಿಗೂ ಹಾವು ಮತ್ತು ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿತ್ತು. ಬಳಿಕ ಬಾಲಕಿ ಮೇಲೆ ಅತ್ಯಾಚಾರವೆಸಗಿತ್ತು. ಅತ್ಯಾಚಾರಕ್ಕೆ ಅಡ್ಡಿ ಪಡಿಸಿದರೆ ಮತ್ತು ಈ ವಿಷಯ ಬಹಿರಂಗಪಡಿಸಿದರೆ ಹಾವಿನಿಂದ ಕಚ್ಚಿಸುವ ಬೆದರಿಕೆಯನ್ನೂ ಹಾಕಿತ್ತು. 
 
ಘಟನೆ ನಡೆದ ಬಳಿಕ ಬಾಲಕಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಳು. ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಇತ್ತೀಚೆಗೆ ಜಿಮ್‌ ತರಬೇತು ದಾರ ಫೈಸಲ್‌ ದಯ್ನಾನಿ ಮತ್ತು ಆತನ ಕೆಲ ಸ್ನೇಹಿತರನ್ನು ಬಂಧಿಸಿದ್ದರು. ಬಂಧಿತರ ವಿಚಾರಣೆ ವೇಳೆ ಹೀಗೆಯೇ ಹಾವು ತೋರಿಸಿ ಹಲವರ ಮೇಲೆ ಅತ್ಯಾಚಾರವೆಸಗಿದ, ಚಿನ್ನಾಭರಣಗಳನ್ನು ದೋಚಿದ, ಭೂ ಅವ್ಯವಹಾರಗಳಲ್ಲಿ ಭಾಗಿ ಯಾದ ವಿಷಯವನ್ನು ಆರೋಪಿಗಳು ಬಹಿರಂಗ ಪಡಿಸಿದ್ದಾರೆ. ಯುವಕರ ಗುಂಪಿನ ಈ ವಿಚಿತ್ರ ತಂತ್ರ ಸಾಕಷ್ಟು ಸುದ್ದಿ ಮಾಡುತ್ತಲೇ, ಈ ಗುಂಪಿನಿಂದ ತೊಂದರೆಗೆ ಒಳಗಾದ ಇನ್ನೂ ಹಲವು ಮಹಿಳೆಯರು ನಿಧಾನವಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರುತ್ತಿದ್ದಾರೆ. 
 
ಹಾವು ಪೂರೈಕೆ: ಸ್ನೇಕ್‌ ಗ್ಯಾಂಗ್‌ನ ಫೈಸಲ್‌ಗೆ ಹಾವಾಡಿಗನೊಬ್ಬ ಹಾವು ಪೂರೈಸುತ್ತಿದ್ದು, ಈ ಮೂಲಕ ಅವರು ವಿವಿಧೆಡೆಗೆ ತೆರಳಿ ಕೃತ್ಯದಲ್ಲಿ ಭಾಗಿಯಾಗುತ್ತಿದ್ದರು. ಈ ಸಂಬಂಧ ವನ್ಯಜೀವಿ ಸಂರ ಕ್ಷಣಾ ಕಾಯ್ದೆ ಪ್ರಕಾರವೂ ಕೇಸು ದಾಖಲಿಸಿ ಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಏನಿದು ಸ್ನೇಕ್‌ ಗ್ಯಾಂಗ್‌? 
 
ಇದು ಹೈದ್ರಾಬಾದ್‌ನ ಹೊರವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗುಂಪಿನ ಹೆಸರು. ಸುಮಾರು 8 ಜನರನ್ನು ಒಳಗೊಂಡ ಈ ತಂಡ ಮಾರಕಾಸ್ತ್ರಗಳ ಜೊತೆಗೆ ವಿಷಕಾರಿ ಹಾವುಗಳನ್ನು ಇಟ್ಟುಕೊಂಡು ಜನರನ್ನು ಬೆದರಿಸಿ ಅವರ ಚಿನ್ನಾಭರಣಗಳನ್ನು ದೋಚು ತ್ತಿತ್ತು. ಮಹಿಳೆಯರಿಗೆ ಹಾವು ತೋರಿಸಿ ಸಾಮೂಹಿಕ ಅತ್ಯಾಚಾರವೆಸಗುತ್ತಿತ್ತು, ಬಡವರ ಜಮೀನಿನ ಮೇಲೆ ಕಣ್ಣು ಹಾಕಿ ಅವುಗಳನ್ನು ಅಕ್ರಮವಾಗಿ ಪಡೆದುಕೊಳ್ಳು ತ್ತಿತ್ತು. ಕೆಲ ದಿನಗಳ ಹಿಂದೆ ಯುವತಿಯೊಬ್ಬಳಿಗೆ ಹಾವು ತೋರಿಸಿ ಬೆದರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಯುವತಿ ಪ್ರಿಯಕರನ ಎದುರೇ ಈ ಕೃತ್ಯ ನಡೆಸಿದ್ದರು. ಈಕೆ ಪೊಲೀಸರಿಗೆ ದೂರು ನೀಡಿದ ಮೇಲೆ ಈ ಗ್ಯಾಂಗ್‌ ಸಿಕ್ಕಿ ಬಿದ್ದಿದೆ. 
 
 

Share this Story:

Follow Webdunia kannada