Select Your Language

Notifications

webdunia
webdunia
webdunia
webdunia

ಸ್ವಾಮಿಗೆ ಜೆಎನ್‌ಯು ಉಪಕುಲಪತಿ ಸ್ಥಾನ ವದಂತಿ, ಅವರಿಗೆ ವಯಸ್ಸಾಗಿದೆ: ಸ್ಮೃತಿ ಇರಾನಿ

ಸ್ವಾಮಿಗೆ ಜೆಎನ್‌ಯು ಉಪಕುಲಪತಿ ಸ್ಥಾನ ವದಂತಿ, ಅವರಿಗೆ ವಯಸ್ಸಾಗಿದೆ: ಸ್ಮೃತಿ ಇರಾನಿ
ನವದೆಹಲಿ , ಭಾನುವಾರ, 27 ಸೆಪ್ಟಂಬರ್ 2015 (16:07 IST)
ಪ್ರತಿಷ್ಠಿತ ಜವಾಹರಲಾಲ್ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಬಿಜೆಪಿಯ ಫೈಯರ್ ಬ್ರ್ಯಾಂಡ್ ನಾಯಕ ಸುಬ್ರಮಣ್ಯ ಸ್ವಾಮಿಯವರನ್ನು ನೇಮಕ ಮಾಡಲಾಗುತ್ತದೆ ಎಂಬ ಸುದ್ದಿಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅಲ್ಲಗಳೆದಿದ್ದಾರೆ.

ಕೇಂದ್ರ ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರ, ಉಪಕುಲಪತಿ ಹುದ್ದೆಗೆ ನೇಮಕ ಮಾಡುವ ಮಾಡುವ ಅಧಿಕಾರ ತಮ್ಮ ಅಡಿಯಲ್ಲಿಲ್ಲ. ಅದು ಸರ್ಚ್ ಸಮಿತಿಗೆ ಸಂಬಂಧಿಸಿದ ಅಧಿಕಾರ. ಬಹುಶಃ ಈ ನಿಯಮಗಳ ಕುರಿತು ಅರಿವಿಲ್ಲದ ಯಾರೋ ಈ ವದಂತಿಯನ್ನು ಹುಟ್ಟಿ ಹಾಕಿದ್ದಾರೆ ಎಂದು ಸಚಿವರು ಹೇಳಿದ್ದಾರೆ. 
 
ಅಲ್ಲದೆ, ಸ್ವಾಮಿಯವರು ಈ ಹುದ್ದೆಗೆ ನಿಗದಿ ಪಡಿಸಿರುವ ವಯಸ್ಸನ್ನು ದಾಟಿದ್ದಾರೆ ಎಂದ ಸಚಿವೆ ಸ್ವಾಮಿಯವರು ರಾಜೀವಗಾಂದಿ ವಿಶ್ವವಿದ್ಯಾಲಯದ ಉನ್ನತ ಹುದ್ದೆಗೇರುವ ಹುದ್ದೆಗೇರುವ ಸುದ್ದಿ ಕೇಳಿ ಎಡಪಂಥೀಯರು ಚಿಂತೆಗೀಡಾಗಿದ್ದರು, ಮತ್ತೆ ಕೆಲವರು ಭಯಗ್ರಸ್ತರಾಗಿದ್ದರು ಎಂದು ನನಗೆ ತಿಳಿದಿದೆ ಎಂದು ವ್ಯಂಗ್ಯವಾಡಿದ್ದಾರೆ. 
 
ಸ್ವಾಮಿ ಅವರು ಜೆಎನ್‌ಯು ಉಪಕುಲಪತಿಯಾಗುತ್ತಾರೆ ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದೆ. ಇನ್ನೊಂದೆಡೆ ವಿಶ್ವವಿದ್ಯಾಲಯಕ್ಕಿರುವ ನೆಹರು ಅವರ ಹೆಸರನ್ನು ಬದಲಾಯಿಸಿ, ಸುಭಾಷ್ ಚಂದ್ರ ಬೋಸ್ ಅವರ ಹೆಸರನ್ನು ವಿಶ್ವವಿದ್ಯಾಲಯಕ್ಕಿಡುವಂತೆ ಸುಬ್ರಮಣ್ಯ ಸ್ವಾಮಿ ಆಗ್ರಹಿಸಿದ್ದಾರೆ.

Share this Story:

Follow Webdunia kannada