Webdunia - Bharat's app for daily news and videos

Install App

ಪತಿಯನ್ನು ಜೈಲಿನಿಂದ ಬಿಡುಗಡೆಗೊಳಿಸಲು ಸೆಕ್ಸ್ ಸುಖ ನೀಡು ಎಂದ ಪೊಲೀಸ್ ಅಧಿಕಾರಿ

Webdunia
ಬುಧವಾರ, 14 ಜೂನ್ 2017 (18:53 IST)
ಪತಿಯನ್ನು ಕೇಸ್‌ನಿಂದ ಮುಕ್ತಗೊಳಿಸಬೇಕು ಎಂದು ಬಯಸಿದಲ್ಲಿ ನನ್ನೊಂದಿಗೆ ಒಂದು ರಾತ್ರಿ ಸೆಕ್ಸ್‌ನಲ್ಲಿ ಪಾಲ್ಗೊಳ್ಳು ಎಂದು ಮಹಿಳೆಯನ್ನು ಕೋರಿದ್ದ ಪೊಲೀಸ್ ಅಧಿಕಾರಿಯನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ. 
 
ಕಳೆದ ವಾರ  1 ಕೆಜಿ ಓಪಿಯಮ್ ಡ್ರಗ್ಸ್‌ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ವ್ಯಕ್ತಿಯ ಪತ್ನಿ, ಪತಿಯನ್ನು ಜೈಲಿನಿಂದ ಬಿಡುಗಡೆಗೊಳಿಸಲು ಪ್ರಯತ್ನಿಸುತ್ತಿರುವಾಗ ಪೊಲೀಸ್ ಅಧಿಕಾರಿಯೊಬ್ಬ ಸಹಾಯ ನೀಡುವುದಾಗಿ ತಿಳಿಸಿದ್ದಾನೆ. ಆದರೆ, ಅದು ಸಹಾಯವಲ್ಲ ಒಪ್ಪಂದ ಎನ್ನುವುದು ಮಹಿಳೆಗೆ ನಂತರ ತಿಳಿದು ಬಂದಿದೆ. 
 
ಭ್ರಷ್ಟಾಚಾರ ನಿಗ್ರಹ ದಳ, ಮಹಿಳೆ ನೀಡಿದ ದೂರಿನ ಮೇರೆಗೆ ರಾಜೀವ್ ಗಾಂಧಿ ಪೊಲೀಸ್ ಠಾಣೆಯ ಅಧಿಕಾರಿ ಕಮಾಲ್‌ದನ್ ಚರನ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
 
ಪೊಲೀಸ್ ಅಧಿಕಾರಿಯಿಂದ ಅಶ್ಲೀಲ ಪ್ರಸ್ತಾವನೆ
 
ಪೊಲೀಸ್ ಅಧಿಕಾರಿ ಚರಣ್ 1ಕೆಜಿ ಓಪಿಯಮ್ ಡ್ರಗ್ಸ್ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದ. ಆರೋಪಿಯ ಪತ್ನಿ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿ, ಪತಿಯನ್ನು ಜೈಲಿನಿಂದ ಬಿಡಿಸುವಲ್ಲಿ ನೆರವು ನೀಡುವಂತೆ ಕೋರಿದ್ದಾಳೆ.
 
ಪತಿಯ ಬಿಡುಗಡೆಗೆ 2 ಲಕ್ಷ ರೂಪಾಯಿ ನೀಡಬೇಕು ಮತ್ತು ಒಂದು ರಾತ್ರಿ ನನ್ನೊಂದಿಗೆ ಮಲಗಬೇಕು ಎನ್ನುವ ಷರತ್ತನ್ನು ಪೊಲೀಸ್ ಅಧಿಕಾರಿ ಆರೋಪಿಯ ಪತ್ನಿಗೆ ಒಡ್ಡಿದ್ದಾನೆ. 
 
ಪತಿಯನ್ನು ಹೇಗಾದರೂ ಮಾಡಿ ಜೈಲಿನಿಂದ ಬಿಡುಗಡೆಗೊಳಿಸಬೇಕು ಎನ್ನುವ ಉದ್ದೇಶದಿಂದ ಅದು ಹೇಗೋ 1 ಲಕ್ಷ ರೂಪಾಯಿ ಹೊಂದಿಸಿ ನೀಡಿದ್ದಾಳೆ. ಮತ್ತೆ ಭದ್ರತೆಗಾಗಿ 1 ಲಕ್ಷ ರೂಪಾಯಿ ಚೆಕ್ ನೀಡಿದ್ದಾಳೆ.
 
ಹಣ ಪಡೆದರೂ ತೃಪ್ತನಾಗದ ಪೊಲೀಸ್ ಅಧಿಕಾರಿ ಇಂದು ರಾತ್ರಿ ಮನೆಗೆ ಬರುತ್ತೇನೆ ನನ್ನೊಂದಿಗೆ ಮಲಗಬೇಕು ಎಂದು ಒತ್ತಾಯಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಮಹಿಳೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಾಳೆ.  
 
ಪೊಲೀಸ್ ಅಧಿಕಾರಿಯನ್ನು ರೆಡ್‌ಹ್ಯಾಂಡಾಗಿ ಹಿಡಿಯಬೇಕು ಎಂದು ಪೊಲೀಸರು ಮಹಿಳೆಗೆ ಆತ ಹೇಳಿದಂತೆ ಕೇಳಲು ತಿಳಿಸಿದ್ದಾರೆ.  ರಾತ್ರಿ ಪಾಳಿಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ಕಮಾಲ್‌ದನ್ ಚರನ್‌, ಮಹಿಳೆಯ ಮನೆಯೊಳಗೆ ಬಂದ ಕೂಡಲೇ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಚರನ್‌ನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments