Select Your Language

Notifications

webdunia
webdunia
webdunia
webdunia

ಅಖಿಲೇಶ್ ರಾಜ್ಯದಲ್ಲಿ ವರ್ಷಕ್ಕೆ 6 ತಿಂಗಳು ರಜೆಯ ಮಜಾ

ಅಖಿಲೇಶ್ ರಾಜ್ಯದಲ್ಲಿ ವರ್ಷಕ್ಕೆ 6 ತಿಂಗಳು ರಜೆಯ ಮಜಾ
ಲಖನೌ , ಮಂಗಳವಾರ, 21 ಏಪ್ರಿಲ್ 2015 (16:14 IST)
ರಾಜ್ಯವೊಂದರಲ್ಲಿ ಸರಕಾರ ಬದಲಾಯಿತೆಂದರೆ ಅಲ್ಲಿ ಆಡಳಿತದ ನೀತಿಗಳು ಬದಲಾಗುತ್ತವೆ ಎಂದರ್ಥ. ಆದರೆ, ಉತ್ತರ ಪ್ರದೇಶ ರಾಜ್ಯದಲ್ಲಿ ಇದು ರಜೆಗಳ ಪಟ್ಟಿಯಲ್ಲಿನ ಬದಲಾವಣೆ ಕೂಡ. ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಸರಕಾರ ಘೋಷಿಸಿರುವ ರಜೆಗಳ ಪಟ್ಟಿಯಲ್ಲಿ ಸರಕಾರಿ ನೌಕರರು ವರ್ಷಕ್ಕೆ 6 ತಿಂಗಳಷ್ಟೇ ಕೆಲಸ ಮಾಡಲಿದ್ದಾರೆ. 

ಮುಂದಿನ  ವರ್ಷ ವಿಧಾನಸಭಾ ಚುನಾವಣೆ ಇರುವುದರಿಂದ ಸರಕಾರ ಮೂರು ದಿನಗಳ ರಜೆಗಳನ್ನು ಹೆಚ್ಚಿಗೆ ಘೋಷಿಸಿದೆ. 
 
ಹೊಸ ರಜಾದಿನಗಳು  ರಾಜಕೀಯ ನಾಯಕರಿಗೆ ಮೀಸಲಾಗಿವೆ. ಈ ಪಟ್ಟಿಯಲ್ಲಿ ಮಾಜಿ ಪ್ರಧಾನಿಗಳಾದ ಚರಣ್ ಸಿಂಗ್, ಚಂದ್ರಶೇಖರ್, ಬಿಹಾರದ ಮಾಜಿ ಮುಖ್ಯಮಂತ್ರಿ ಕಪೂರಿ ಠಾಕೂರ್ ಜನ್ಮದಿನಗಳು ಕೂಡ ಸೇರಿವೆ. 
 
ಜನರಿಗೆ ಸ್ಪೂರ್ತಿ ನೀಡಲೆಂದು ಈ ದಿಗ್ಗಜರ ಜನ್ಮದಿನಗಳಂದು ರಜೆ ಘೋಷಿಸಲಾಗಿದೆ ಎಂದು ಸಮಾಜವಾದಿ ಪಕ್ಷದ ಶಾಸಕರೊಬ್ಬರು ಹೇಳುತ್ತಾರೆ.  
 
ಉತ್ತರ ಪ್ರದೇಶದಲ್ಲಿ ಘೋಷಿಸಲಾಗಿರುವ ರಜೆಗಳು ಒಟ್ಟು 38. ಇತರ ದೊಡ್ಡ ರಾಜ್ಯಗಳಾದ ಮಧ್ಯ ಪ್ರದೇಶ್ ಮತ್ತು ತಮಿಳುನಾಡಿನಲ್ಲಿ 25 ಸಾರ್ವಜನಿಕ ರಜೆಗಳಿವೆ. 
 
ವಿಧಾನಸಭೆ ಸಿಬ್ಬಂದಿ ಮತ್ತು ಇಲಾಖೆಯ ಪ್ರಧಾನ ಕಚೇರಿಗಳ ಸಿಬ್ಬಂದಿಗಳು ವಾರಕ್ಕೆ ಐದು ದಿನ ಕೆಲಸ ಮಾಡಿದರೆ, ಜಿಲ್ಲಾ ಮಟ್ಟದ ನೌಕರರಿಗೆ ಮೂರು ರಜಾದಿನಗಳು ಮತ್ತು ಎರಡು ಐಚ್ಛಿಕ ರಜೆಗಳನ್ನು ಪಡೆಯುತ್ತಾರೆ. ಬಹುತೇಕ ಸರ್ಕಾರಿ ನೌಕರರು ಒಂದು ವರ್ಷದಲ್ಲಿ 6 ತಿಂಗಳು ಮಾತ್ರ ಕೆಲಸ ಮಾಡಿದಂತಾಗುತ್ತದೆ.  

Share this Story:

Follow Webdunia kannada