Select Your Language

Notifications

webdunia
webdunia
webdunia
webdunia

12 ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ 6 ಜನರ ಬಂಧನ

12 ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ 6 ಜನರ ಬಂಧನ
ನಾಗಪುರ , ಶನಿವಾರ, 27 ಡಿಸೆಂಬರ್ 2014 (15:34 IST)
12 ಜನ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಆರೋಪವನ್ನು ಹೊತ್ತಿದ್ದ 6 ಜನ ದುರುಳರ ಗುಂಪನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 
ಇತ್ತೀಚಿಗೆ 21 ವರ್ಷದ ಶಿಕ್ಷಕಿಯ ಮೇಲೆ ಅತ್ಯಾಚಾರ ಎಸಗಿದ್ದ ಈ ತಂಡದಲ್ಲಿದ್ದ ಆರೋಪಿಗಳನ್ನು ಮೊಹಮ್ಮದ್ ಅಫ್ರೋಜ್ ಝಿಯಾಉದ್ದೀನ್ ಪಠಾಣ್  (33),  ಅನಿಲ್ ರಾಜು ಇಂಗಾಲೆ (25),  ಸುದರ್ಶನ್ ಅಲಿಯಾಸ್ ಸಂಜು ಮಹೇಶ್‌ಕರ್ (26), ದೋಮಾಜಿ ಬೋಯಾರ್ (38), ರೋಶನ್ ಇಂಗಾಲೆ(22) ಮತ್ತು ರಾಮೇಶ್ವರ ಪ್ರಧಾನ್  ಎಂದು ಗುರುತಿಸಲಾಗಿದ್ದು, ಇವರನ್ನು ನಾಗ್ಪುರನ  ಗೋರೆಗಾಂವ್ ಉಪನಗರದ  ಆರೇ ಕಾಲೋನಿಯ ಸ್ಲಂ ಒಂದರಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಆಫ್ರೋಜ್ ತಂಡದ ನಾಯಕನೆಂದು ತಿಳಿದು ಬಂದಿದೆ. 
 
ಡಿಸೆಂಬರ್ 1 ರಂದು ಶಿಕ್ಷಕಿಯೊಬ್ಬರ ಮೇಲೆ ನಡೆದ ಅತ್ಯಾಚಾರ ಪ್ರಕರಣ ಇಡೀ ರಾಜ್ಯದಲ್ಲಿ ಆತಂಕವನ್ನು ಸೃಷ್ಯಿಸಿತ್ತು. ಸ್ನೇಹಿತನ ಜತೆ ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ಅವರನ್ನು ತಡೆದ ಪೊಲೀಸ್ ವೇಷಧಾರಿ ಗುಂಪು  ಪೊಲೀಸ್ ಠಾಣೆಗೆ ಕರೆದೊಯ್ಯುವ ನೆಪದಲ್ಲಿ ಅವರಿಬ್ಬರನ್ನು ಕರೆದೊಯ್ದಿತ್ತು.  ಯುವಕನನ್ನು ಅರ್ಧ ದಾರಿಯಲ್ಲಿಯೇ ಬಿಟ್ಟ ದುರುಳರ ತಂಡ ಯುವತಿಯನ್ನು ಅಜ್ಞಾತ ಸ್ಥಳಕ್ಕೆ ಕೊಂಡೊಯ್ದು ಅತ್ಯಾಚಾರ ನಡೆಸಿತ್ತು. 
 
ನಂತರ ಯುವತಿಯನ್ನವರು ಆಕೆಯ ಮನೆಯ ಬಳಿ ಬಿಟ್ಟು ಹೋಗಿದ್ದರು.  ತನ್ನ ಕುಟುಂಬ ಸದಸ್ಯರಿಗೆ ಎಲ್ಲಾ ಘಟನೆಯನ್ನು ವಿವರಿಸಿದ್ದ ಆಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ತನಿಖೆ ನಡೆಸಿದ ಪೊಲೀಸರಿಗೆ ಈ 6 ಮಂದಿ ಅಪರಾಧಿಗಳು ಅನೇಕ ರೇಪ್ ಪ್ರಕರಣಗಳಲ್ಲದೇ, ಕಳ್ಳತನ, ದರೋಡೆ, ವಾಹನ ಕಳ್ಳತನ ಮತ್ತು ಕೊಲೆ ಪ್ರಕರಣಗಳಲ್ಲಿ ಭಾಗಿಯಾದ ವಿಷಯ ತಿಳಿದು ಬಂದಿತು. 

Share this Story:

Follow Webdunia kannada