ಲಕ್ನೋ: ಸ್ನೇಹಿತನೊಂದಿಗೆ ಚ್ಯಾಟ್ ಮಾಡುತ್ತಿದ್ದನ್ನು ವಿರೋಧಿಸಿದ್ದಕ್ಕೆ ಸ್ವಂತ ಅಕ್ಕನೇ ತನ್ನ ತಮ್ಮನನ್ನು ಇಯರ್ ಫೋನ್ ಕೇಬಲ್ ನಿಂದ ಉಸಿರುಗಟ್ಟಿಸಿ ಜೀವ ತೆಗೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
9 ವರ್ಷದ ಸಹೋದರನನ್ನು 15 ವರ್ಷದ ಅಕ್ಕ ಹತ್ಯೆ ಮಾಡಿದ್ದಾಳೆ. ಬಳಿಕ ಮೃತದೇಹವನ್ನು ಸ್ಟೋರ್ ರೂಂನಲ್ಲಿ ಅಡಗಿಸಿಟ್ಟಿದ್ದಾಳೆ. ಈ ವೇಳೆ ಮನೆಯಲ್ಲಿ ಪೋಷಕರಿರಲ್ಲ ಎನ್ನಲಾಗಿದೆ.
ಮನೆಗೆ ಬಂದ ಪೋಷಕರು ಮಗನನ್ನು ಕಾಣದೇ ಹೋದಾಗ ಪೊಲೀಸರಿಗೆ ದೂರು ನೀಡಿದ್ದಾರೆ. ಮರುದಿನ ಮನೆಯ ಸ್ಟೋರ್ ರೂಂನಿಂದ ವಾಸನೆ ಬರುತ್ತಿದ್ದಾಗ ಸಂಶಯಗೊಂಡು ತೆರೆದು ನೋಡಿದಾಗ ಮೃತದೇಹ ಪತ್ತೆಯಾಗಿದೆ. ಕೂಲಂಕುಷವಾಗಿ ಪರಿಶೀಲಿಸಿದಾಗ ಅಕ್ಕನೇ ಹತ್ಯೆ ಮಾಡಿರುವುದು ತಿಳಿದುಬಂದಿದೆ.