Select Your Language

Notifications

webdunia
webdunia
webdunia
webdunia

ದೆಹಲಿಯಲ್ಲಿ ಸಿಕ್ಕಿಂ ಮೂಲದ ಮಹಿಳೆಯ ಮೇಲೆ ಅತ್ಯಾಚಾರ

ದೆಹಲಿಯಲ್ಲಿ ಸಿಕ್ಕಿಂ ಮೂಲದ ಮಹಿಳೆಯ ಮೇಲೆ ಅತ್ಯಾಚಾರ
ನವದೆಹಲಿ , ಸೋಮವಾರ, 2 ಮಾರ್ಚ್ 2015 (16:02 IST)
ಉದ್ಯೋಗ ಕೊಡಿಸುವ ಆಮಿಷ ತೋರಿಸಿ ಸಿಕ್ಕಿಂ ಮಹಿಳೆಯೊಬ್ಬಳನ್ನು ದೆಹಲಿಗೆ ಕರೆ ತಂದು ಅತ್ಯಾಚಾರವೆಸಗಿದ ಆರೋಪದ ಮೇಲೆ ವೈದ್ಯ ಮತ್ತು ಆತನ ನಾಲ್ವರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.
 
ದಕ್ಷಿಣ ದೆಹಲಿಯ ಗೌತಮ್ ನಗರದಲ್ಲಿರುವ ಮನೆಯಲ್ಲಿ ಆರೋಪಿ ವೈದ್ಯನು ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ದಾಖಲಿಸಿದ್ದಾಳೆ. 
 
ಅಟೋರಿಕ್ಷಾ ಚಾಲಕನ ನೆರವು ಪಡೆದ ಮಹಿಳೆ ಪೊಲೀಸ್ ಠಾಣೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
 
ಬ್ಯೂಟಿ ಪಾರ್ಲರ್‌ನಲ್ಲಿ ಉದ್ಯೋಗ ಕೊಡಿಸುವ ಆಮಿಷ ತೋರಿಸಿ ಸಿಕ್ಕಿಂನಿಂದ ದೆಹಲಿಗೆ ಕರೆದುಕೊಂಡ ಬಂದ ವೈದ್ಯ ತನ್ನ ಇತರ ನಾಲ್ವರು ಸಹಚರರೊಂದಿಗೆ ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಒತ್ತಡ ಹೇರಿದ್ದನು ಎಂದು ಅತ್ಯಾಚಾರಕ್ಕೊಳಗಾದ ಮಹಿಳೆ ತಿಳಿಸಿದ್ದಾಳೆ.
 
ಆರೋಪಿಗಳಾದ ವೇಶ್ಯಾವಾಟಿಕೆ ನಡೆಸುತ್ತಿದ್ದ ಸುಮನ್ ಆಕೆಯ ಪತಿ ದೀಪಕ್, ಇತರ ಇಬ್ಬರು ಆರೋಪಿಗಳಾದ ಧರ್ಮವೀರ್ ಮತ್ತು ಕಮಲ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.  
 
ವೈದ್ಯನ ನೇತೃತ್ವದ ಗ್ಯಾಂಗ್ ಕಳೆದ ಕೆಲ ತಿಂಗಳುಗಳಿಂದ ಇಂತಹ ಕೃತ್ಯಗಳಲ್ಲಿ ತೊಡಗಿತ್ತು. ಯುವತಿಯರಿಗೆ ಉದ್ಯೋಗ ಕೊಡಿಸುವ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
 

Share this Story:

Follow Webdunia kannada