ಮೇಘಾಲಯ ಹನಿಮೂನ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

Sampriya
ಶನಿವಾರ, 2 ಆಗಸ್ಟ್ 2025 (16:30 IST)
ಶಿಲ್ಲಾಂಗ್: ಮೇಘಾಲಯ ಹನಿಮೂನ್‌ನಲ್ಲಿ ಪತಿಯನ್ನು ಪ್ರಿಯಕರ ಸಹಾಯದಿಂದ ಹತ್ಯೆ ಮಾಡಿದ ಪ್ರಕರಣ ಸಂಬಂಧ ಆರೋಪಿಗಳಿಗೆ ಇನ್ನೂ 14 ದಿನಗಳ ನ್ಯಾಯಾಂಗ ಬಂಧವನ್ನು ವಿಧಿಸಲಾಗಿದೆ. 

ದೇಶವನ್ನೇ ಬೆಚ್ಚಿಬೀಳಿಸಿದ ಇಂಧೋರ್‌ನ ಉದ್ಯಮಿ ರಾಜಾ ರಘುವಂಶಿ ಹತ್ಯೆ ಸಂಬಂಧ ಆರೋಪಿಗಳಾದ ಆತನ ಪತ್ನಿ ಸೋನಂ ರಘುವಂಶಿ, ಆಕೆಯ ಪ್ರಿಯಕರ ರಾಜ್ ಕುಶ್ವಾಹಾ ಮತ್ತು ವಿಶಾಲ್ ಚೌಹಾಣ್ ಅವರಿಗೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಪ್ರಥಮ ದರ್ಜೆ) ಡಿಕೆಕೆ ಮಿಹ್ಸಿಲ್ ನ್ಯಾಯಾಲಯವು ಆಗಸ್ಟ್ 1 ರಿಂದ ಇನ್ನೂ 14 ದಿನಗಳ ನ್ಯಾಯಾಂಗ ಬಂಧನವನ್ನು ನೀಡಿದೆ.

ಪ್ರಕರಣ ಸಂಬಂಧ ನಡೆದ ವಿಡಿಯೊ ಕಾನ್ಫರೆನ್ಸ್ ವಿಚಾರಣೆಯಲ್ಲಿ  ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ತುಷಾರ್ ಚಂದಾ ಅವರು 14ದಿನಗಳ ನ್ಯಾಯಾಂಗ ಬಂಧನವನ್ನು ತಿಳಿಸಿದ್ದಾರೆ.

ಜುಲೈ 31 ರಂದು, ಇತರ ಇಬ್ಬರು ಆರೋಪಿಗಳಾದ ಆಕಾಶ್ ರಜಪೂತ್ ಮತ್ತು ಆನಂದ್ ಕುರ್ಮಿ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು.

ಏನಿದು ಪ್ರಕರಣ: ಇದೇ ವರ್ಷದ ಜನವರಿಯಂದು ಮೇಘಾಲಯಕ್ಕೆ ಹನಿಮೂನ್ ಗೆ ತೆರಳಿದ್ದ ಇಂದೋರ್ ಮೂಲದ ಉದ್ಯಮಿ ರಾಜಾ ರಘುವಂಶಿ ಅವರ ಹತ್ಯೆಯಾಗಿತ್ತು. ತನಿಖೆ ವೇಳೆ ಆತನ ಪತ್ನಿ ಸೋನಂ ಮತ್ತು ಆಕೆಯ ಪ್ರಿಯಕರನ ಗ್ಯಾಂಗ್‌ ರಾಜಾ ರಘುವಂಶಿಯನ್ನು ಹತ್ಯೆ ಮಾಡಿತ್ತು.ನಾಪತ್ತೆ ಪ್ರಕರಣದ ಬಳಿಕ ಪತ್ನಿ ಸೋನಂ ಪೊಲೀಸರಿಗೆ ಶರಣಾಗಿದ್ದಳು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯ ಒಂದು ಹೇಳಿಕೆಯಿಂದ ಸಿಎಂ ಬದಲಾವಣೆ ಕಿತ್ತಾಟಕ್ಕೆ ಬಿಗ್ ಟ್ವಿಸ್ಟ್

ಡಿಕೆ ಶಿವಕುಮಾರ್ ಟೆಂಪಲ್ ರನ್ ನಲ್ಲಿರುವಾಗ ಸದನದಲ್ಲಿ ಸಿಎಂ ಹುದ್ದೆ ಬಗ್ಗೆ ಸಿದ್ದರಾಮಯ್ಯ ಶಾಕಿಂಗ್ ಘೋಷಣೆ

ಪ್ರಿಯಾಂಕ ಗಾಂಧಿಗೆ ತನ್ನದೇ ಕೈ ಅಡುಗೆ ತಿನಿಸಿದ್ದಲ್ಲದೆ ಕೆಲಸವೂ ಮಾಡಿಕೊಟ್ಟ ನಿತಿನ್ ಗಡ್ಕರಿ: ಅಪರೂಪದ ಕ್ಷಣ video

ಗ್ಯಾರಂಟಿಗಳಿಗೆ ದಲಿತರ 39 ಸಾವಿರ ಕೋಟಿ ರೂಪಾಯಿ ಬಳಕೆಯಾಗಿದೆ: ಛಲವಾದಿ ನಾರಾಯಣಸ್ವಾಮಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments