Select Your Language

Notifications

webdunia
webdunia
webdunia
webdunia

ವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದಿದ್ದ ಟಾಲಿವುಡ್ ನಟಿ ಶ್ವೇತಾ ಬಸು ಬಿಡುಗಡೆ

ವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದಿದ್ದ ಟಾಲಿವುಡ್ ನಟಿ ಶ್ವೇತಾ ಬಸು ಬಿಡುಗಡೆ
ಹೈದರಾಬಾದ್ , ಗುರುವಾರ, 30 ಅಕ್ಟೋಬರ್ 2014 (11:25 IST)
ವೇಶ್ಯಾವಾಟಿಕೆ ಆರೋಪದಲ್ಲಿ ಸಿಕ್ಕಿಬಿದ್ದಿದ್ದ ಟಾಲಿವುಡ್ ನಟಿ ಶ್ವೇತಾ ಬಸು ಬಿಡುಗಡೆಗೆ ನಾಂಪಲ್ಲಿ ಸೆಷನ್ಸ್ ಕೋರ್ಟ್ ಆದೇಶ ನೀಡಿದೆ. ಮನಪರಿವರ್ತನಾ ಕೇಂದ್ರದಲ್ಲಿ ಶ್ವೇತಾಬಸು ಅವರಿಗೆ ಜೀವಬೆದರಿಕೆ ಉಂಟಾಗಿದೆ. ಕಳೆದ ಹಲವು ದಿನಗಳಿಂದ ಅವರಿಗೆ ಕೆಲವು ಪ್ರಭಾವಿ ರಾಜಕಾರಣಿಗಳು ಮತ್ತು ಪ್ರಭಾವಿ ಉದ್ಯಮಪತಿಗಳು ಜೀವಬೆದರಿಕೆ ಹಾಕಿದ್ದಾರೆ.

ವೇಶ್ಯಾವಾಟಿಕೆ ಪ್ರಕರಣದಲ್ಲಿ ತಮ್ಮ ಹೆಸರನ್ನು ಶ್ವೇತಾ ಬಹಿರಂಗಪಡಿಸಬಹುದೆಂಬ ಆತಂಕದಿಂದ ಅವರಿಗೆ ಜೀವಬೆದರಿಕೆ ಕರೆಗಳನ್ನು ಹಾಕಿದ್ದಾರೆ. ಬಂಜಾರಾ ಹಿಲ್ಸ್‌ನ ಒಂದು ಹೊಟೆಲ್‌ನಲ್ಲಿ ಸಿಕ್ಕಿಬಿದ್ದಿದ್ದ ಶ್ವೇತಾ ಬಸು ಅವರನ್ನು ಮನಃಪರಿವರ್ತನಾ ಕೇಂದ್ರಕ್ಕೆ ಸೇರಿಸಲಾಗಿತ್ತು.

ಶ್ವೇತಾ ಬಸು ಅವರಿಗೆ ಮುಂಬೈನಲ್ಲಿ ವಾಸಕ್ಕೆ ಅವಕಾಶ ಮಾಡಿಕೊಡಲಾಗಿದೆ. ತಮ್ಮ ಜೀವನನಿರ್ಹಹಣೆ ಕಷ್ಟವಾಗಿದ್ದರಿಂದ ವೇಶ್ಯಾವಾಟಿಕೆಗೆ ಇಳಿದಿದ್ದಾಗಿ ಶ್ವೇತಾ ತಪ್ಪೊಪ್ಪಿಕೊಂಡಿದ್ದರು. 

Share this Story:

Follow Webdunia kannada