ಕಾರ್ ಓವರ್ ಟೇಕ್ ಮಾಡಿದ್ದಕ್ಕೆ ಹತ್ಯೆ: ಬಿಜೆಪಿಯಿಂದ ಗಯಾ ಬಂದ್

Webdunia
ಸೋಮವಾರ, 9 ಮೇ 2016 (10:14 IST)
ಜೆಡಿಯು ಎಮ್‌ಎಲ್‌ಸಿ ಪುತ್ರನಿಂದ ವಿದ್ಯಾರ್ಥಿಯ ಹತ್ಯೆ ಖಂಡಿಸಿ ಬಿಜೆಪಿ ಗಯಾ ಬಂದ್‌ಗೆ ಕರೆ ನೀಡಿದೆ. 
 
ಘಟನೆ ನಡೆದಾಗಿನಿಂದ ಆರೋಪಿ ರಾಕಿ (23) ಪರಾರಿಯಾಗಿದ್ದು, ಕ್ರಿಮಿನಲ್ ಸಂಚು ಮತ್ತು ಆರೋಪಿಗೆ ಆಶ್ರಯ ನೀಡಿದ ಆರೋಪದ ಮೇಲೆ ಪೊಲೀಸರು ಆರೋಪಿಯ ತಂದೆ ಬಿಂದಿ ಯಾದವ್‌ನನ್ನು ಬಂಧಿಸಿದ್ದಾರೆ.
 
ವರದಿಗಳ ಪ್ರಕಾರ ರಾಕಿ ದೆಹಲಿಯ ರೈಫಲ್ ಕ್ಲಬ್ ಸದಸ್ಯನಾಗಿದ್ದಾನೆ. 
 
ನಾವು ಬಿಂದಿ ಯಾದವ್ ಮತ್ತು ಅಂಗರಕ್ಷಕನನ್ನು ಬಂಧಿಸಿದ್ದೇವೆ. ಗಯಾದ ಎಸ್ಎಸ್‌ಪಿ ಗರಿಮಾ ಮಲಿಕ್ ತಿಳಿಸಿದ್ದಾರೆ. 
 
ಬಿಹಾರದ ಪ್ರಮುಖ ಉದ್ಯಮಿಯೊಬ್ಬರ ಪುತ್ರ ಆದಿತ್ಯ ಸಚ್‌ದೇವ ಶನಿವಾರ ರಾತ್ರಿ ತನ್ನ ಸ್ನೇಹಿತರ ಜತೆ ಸ್ವಿಫ್ಟ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ. ಆ ಸಂದರ್ಭದಲ್ಲಿ ಬಿಹಾರದ ಎಂಎಲ್‌ಸಿ ಮನೋರಮಾ ದೇವಿಯ ಪುತ್ರ ಕುಳಿತಿದ್ದ ರೇಂಜ್ ರೋವರ್ ಕಾರನ್ನು ಓವರ್ ಟೇಕ್ ಮಾಡಿದ್ದ. 
 
ತನ್ನ ಕಾರನ್ನು ಓವರ್ ಟೇಕ್ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ರಾಕಿ  ಆದಿತ್ಯ ಮತ್ತು ಆತನ ಸ್ನೇಹಿತರ ಜತೆ ವಾಗ್ವಾದಕ್ಕೆ ಇಳಿದಿದ್ದಾನೆ. ಬಳಿಕ ತನ್ನ ಬಳಿ ಇದ್ದ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ಆದಿತ್ಯ ಮೃತಪಟ್ಟಿದ್ದಾನೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಡ್ನಿಯಲ್ಲಿ ನಡೆದ ಮಾರಣಾಂತಿಕ ದಾಳಿ ಬಗ್ಗೆ ಯುಕೆ ಪ್ರಧಾನಿ ಮೊದಲ ರಿಯಾಕ್ಷನ್

2 ವರ್ಷದ ಬಾಲಕಿ ರೇಪ್ ಎಸಗಿ, ಹತ್ಯೆ ಮಾಡಿದವನಿಗೆ ಕ್ಷಮದಾನಕ್ಕೆ ನಿರಾಕರಿಸಿದ ರಾಷ್ಟ್ರಪತಿ

ಆರ್‌ಎಸ್‌ಎಸ್‌, ಬಿಜೆಪಿ ಸಿದ್ಧಾಂತ ದೇಶವನ್ನು ನಾಶಪಡಿಸುತ್ತದೆ: ಮಲ್ಲಿಕಾರ್ಜುನ ಖರ್ಗೆ

ಬಿಜೆಪಿ ಸಾರ್ವಜನಿಕರ ನಂಬಿಕೆಯನ್ನು ಕಳೆದುಕೊಂಡಿದೆ: ಪ್ರಿಯಾಂಕಾ ಗಾಂಧಿ

ಮತ್ತಷ್ಟು ದಾಖಲೆ ಸಮೇತ ಎದುರು ಬರುತ್ತೇವೆ: ಗುಡುಗಿದ ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ
Show comments