Select Your Language

Notifications

webdunia
webdunia
webdunia
webdunia

ಕಪ್ಪುಹಣ ವಾಗ್ದಾನ: ಮೋದಿಯನ್ನು ಪ್ರಶ್ನಿಸಿದ ಸೇನೆ

ಕಪ್ಪುಹಣ ವಾಗ್ದಾನ: ಮೋದಿಯನ್ನು ಪ್ರಶ್ನಿಸಿದ ಸೇನೆ
ಮುಂಬೈ , ಗುರುವಾರ, 30 ಜೂನ್ 2016 (18:14 IST)
ಪ್ರಧಾನಿ ಮೋದಿ ಚುನಾವಣಾ ಪೂರ್ವ ನೀಡಿದ್ದ ಕಪ್ಪು ಹಣ ಮರಳಿ ತರುವ ವಾಗ್ದಾನವನ್ನು ಉಲ್ಲೇಖಿಸಿ ಶಿವಸೇನೆ ಅವರ ಮೇಲೆ ಕಿಡಿಕಾರಿದೆ. ಎಷ್ಟು ಜನ ನಾಗರಿಕರು ನಿಮ್ಮ ಬ್ಯಾಂಕ್ ಖಾತೆಯಲ್ಲಿ 15 ಲಕ್ಷ ಹಣವನ್ನು ಸ್ವೀಕರಿಸಿದ್ದೀರಿ ಎಂದು ಸೇನೆ ವ್ಯಂಗ್ಯವಾಗಿ ಪ್ರಶ್ನಿಸಿದೆ. 
ಕಪ್ಪುಹಣ ಮರಳಿ ತರುವುದು ಅವರ ಮೊದಲ ವಾಗ್ದಾನವಾಗಿತ್ತು. ಇತ್ತೀಚಿಗಿನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ವಿದೇಶದಲ್ಲಿ ಹಣವನ್ನಿಟ್ಟವರು ಶುದ್ಧಹಸ್ತರಾಗಿ ಹೊರಬನ್ನಿ ಅಥವಾ ಮುಂದಿನ ಕ್ರಮವನ್ನೆದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದಲೇ ತಿಳಿಯುತ್ತದೆ. ಹಾವಿನ್ನೂ ಬಿಲದಲ್ಲಿದೆ, ಹೊರಬರಲು ನಿರಾಕರಿಸುತ್ತಿದೆ ಎಂದು ಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದಿದೆ. 
 
2014ರ ಲೋಕಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಕಪ್ಪು ಹಣ ತರುವ ಬಗ್ಗೆ ಮಾತನ್ನಾಡಿದ್ದರು. ಪ್ರತಿ ನಾಗರಿಕ 15 ಲಕ್ಷ ರೂಪಾಯಿಯನ್ನು ಪಡೆದುಕೊಳ್ಳಲಿದ್ದಾನೆ ಎಂದು ಅವರು ಘೋಷಿಸಿದ್ದರು. 
 
ಚುನಾವಣೆಗೂ ಮುನ್ನ 2 ಲಕ್ಷ ಕೋಟಿ ಕಪ್ಪು ಹಣ ವಿದೇಶಿ ಬ್ಯಾಂಕುಗಳಲ್ಲಿದೆ. ಅದನ್ನೆಲ್ಲ ಮರಳಿ ತಂದು ಪ್ರತಿ ನಾಗರಿಕನ ಖಾತೆಯಲ್ಲಿ 15 ಲಕ್ಷ ಜಮಾ ಆಗುವಂತೆ ಮಾಡುತ್ತೇನೆ ಎಂದಿದ್ದರು. 2 ವರ್ಷದಿಂದ ಅಧಿಕಾರದಲ್ಲಿರುವ ಸರ್ಕಾರ ಎಷ್ಟು ಹಣವನ್ನು ವಾಪಸ್ ತಂದಿದೆ ಎಂದು ಸೇನೆ ಪ್ರಶ್ನಿಸಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸೆನ್ಸೆಕ್ಸ್: 27 ಸಾವಿರ ಅಂಶಗಳ ಗಡಿ ದಾಟಿದ ಶೇರುಸಂವೇದಿ ಸೂಚ್ಯಂಕ