Select Your Language

Notifications

webdunia
webdunia
webdunia
webdunia

ಗುಜರಾತಿಗಳನ್ನು ಲೈಂಗಿಕ ಕಾರ್ಯಕರ್ತರಿಗೆ ಹೋಲಿಸಿದ ಶಿವಸೇನಾ

ಗುಜರಾತಿಗಳನ್ನು ಲೈಂಗಿಕ ಕಾರ್ಯಕರ್ತರಿಗೆ ಹೋಲಿಸಿದ ಶಿವಸೇನಾ
ಮುಂಬೈ , ಶುಕ್ರವಾರ, 2 ಮೇ 2014 (19:31 IST)
ಮುಂಬೈನಲ್ಲಿ ಸಾರ್ವತ್ರಿಕ ಚುನಾವಣೆಯ ಮತದಾನ ಮುಕ್ತಾಯವಾದ ನಂತರ ಬಿಜೆಪಿ ಮಿತ್ರಪಕ್ಷ  ಪಕ್ಷ ಶಿವಸೇನೆಯ ವೈಖರಿಯಲ್ಲಿ ಬದಲಾವಣೆಯಾದಂತೆ ತೋರುತ್ತಿದೆ.  ಬಿಜೆಪಿ ಮತ್ತು ನರೇಂದ್ರ ಮೋದಿಯವರ ನಿಕಟ ಗುಜರಾತಿ ಸಮುದಾಯದ ಮೇಲೆ ದಾಳಿ ನಡೆಸಿರುವ ಶಿವಸೇನೆ ಅವರನ್ನು'ಲೈಂಗಿಕ  ಕಾರ್ಯಕರ್ತ'ರಿಗೆ ಹೋಲಿಸಿದೆ.
 
ರಾಜ್ಯದಲ್ಲಿ ವಾಸಿಸುವ ಮೋದಿ ಬೆಂಬಲಿಗ ಗುಜರಾತಿ ಉದ್ಯಮಿಗಳು ಮಹಾರಾಷ್ಟ್ರ ದಿವಸನ್ನು ಯಾಕೆ ಆಚರಿಸುವುದಿಲ್ಲ? ಎಂದು ಪಕ್ಷ ಪ್ರಶ್ನಿಸಿದೆ.
 
ಗುಜರಾತಿ ಉದ್ಯಮಿಗಳು 'ಲೈಂಗಿಕ ಕಾರ್ಮಿಕರಂತೆ  ಮುಂಬೈಯನ್ನು ದುರ್ಬಳಕೆ ಮಾಡುತ್ತಿದ್ದಾರೆ. ನಮ್ಮ ಕೆಲಸದಲ್ಲಿ ನಾವು ಸಂತೋಷವಾಗಿದ್ದೇವೆ ಮತ್ತು ರಾಜಕೀಯದಲ್ಲಿ ನಮಗೆ ಯಾವುದೇ ಆಸಕ್ತಿ ಇಲ್ಲ ಎಂದು ಹೇಳುವ ಈ ಉದ್ಯಮಿಗಳು  ತಮ್ಮ ಜಾತಿ ಮತ್ತು ಧರ್ಮದ ವ್ಯಕ್ತಿ ಪ್ರಧಾನಿ ಆಗುತ್ತಾರೆ ಎಂಬ ನಂಬಿಕೆಯಲ್ಲಿದ್ದಾರೆ ಎಂದು ಶಿವಸೇನೆಯ ಮುಖವಾಣಿ 'ಸಾಮ್ನಾ'ದಲ್ಲಿ ಬರೆಯಲಾಗಿದೆ.
 
'ಇವರಲ್ಲಿ ಎಷ್ಟು ಜನ ತಮ್ಮ ಮನೆಯಿಂದ ಹೊರ ಬಂದು ಮಹಾರಾಷ್ಟ್ರ ದಿವಸವನ್ನು ಆಚರಿಸಿದ್ದಾರೆ? ಮುಂಬೈನಲ್ಲಿ ಇದ್ದು ಅವರು ಹಣವನ್ನು ಸಂಪಾದಿಸುತ್ತಿದ್ದಾರೆ.ಆದರೆ ಲೈಂಗಿಕ ಕಾರ್ಯಕರ್ತರಂತೆ ಮುಂಬೈನ್ನು ದುರ್ಬಳಕೆ ಮಾಡಿದ್ದಾರೆ. ಕೈಯಲ್ಲಿ ಮಡಕೆಯನ್ನು ಹಿಡಿದುಕೊಂಡು ಬಂದವರು ಬಂಗಾರದ ಜಗತ್ತಿನಲ್ಲಿ ಬದುಕುತ್ತಿದ್ದಾರೆ' ಎಂದು ಸಾಮ್ನಾ ಮೂಲಕ ಶಿವಸೇನೆ ಗುಜರಾತಿಗಳನ್ನು ಹೀನಾಯವಾಗಿ ಟೀಕಿಸಿದೆ. 
 
'ಮುಂಬೈನಲ್ಲಿ ಹಣವನ್ನು ಗಳಿಸುವ, ಈ ಉದ್ಯಮಿಗಳು ದೇಶದ ರಾಜಕೀಯಕ್ಕೆ ಬಾಧೆಯನ್ನು ತರುತ್ತಿದ್ದಾರೆ. ಯಾರು ಪ್ರಧಾನಿ ಆಗಬೇಕೆಂದು ಇವರು ಲೆಕ್ಕ ಹಾಕುತ್ತಿದ್ದಾರೆ. ನರೇಂದ್ರ ಮೋದಿ ಹೆಸರಿನಲ್ಲಿ ಒಟ್ಟಾಗಿ ಮುಂದೆ ಬರುವ ಗುಜರಾತಿ ಮತ್ತು ಇತರ ಸಮುದಾಯಗಳ ಜನರು ಶಿವಾಜಿ  ಮಹಾರಾಜ್ ನೆನಪಿಗಾಗಿ ನಡೆಯುವ ಮಹಾರಾಷ್ಟ್ರ ದಿವಸ ಅನ್ನು  ಆಚರಿಸಲು ಕೂಡ ಮುಂದೆ ಬರಬೇಕು' ಎಂದು ಸಾಮ್ನಾ ಆಕ್ಷೇಪಿಸಿದೆ. 

Share this Story:

Follow Webdunia kannada