Select Your Language

Notifications

webdunia
webdunia
webdunia
webdunia

ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ ಮೈತ್ರಿಕೂಟದ ಸರಕಾರ ಅಸ್ತಿತ್ವಕ್ಕೆ

ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ ಮೈತ್ರಿಕೂಟದ ಸರಕಾರ ಅಸ್ತಿತ್ವಕ್ಕೆ
ಮುಂಬೈ , ಸೋಮವಾರ, 20 ಅಕ್ಟೋಬರ್ 2014 (16:05 IST)
ಮಹಾರಾಷ್ಟದಲ್ಲಿ ಬಿಜೆಪಿ ಜತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಲು ಶಿವಸೇನೆ ಒಪ್ಪಿಕೊಂಡಿದೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.
 
ಮೂಲಗಳ ಪ್ರಕಾರ ಉಭಯ ಪಕ್ಷಗಳ ರಾಜ್ಯ ನಾಯಕರು ಸೋಮವಾರ ಬೆಳಗ್ಗೆ ಸಭೆ ನಡೆಸಿ ಈ ಬಗ್ಗೆ ಚರ್ಚಿಸಿದ್ದಾರೆ. ಪ್ರಸ್ತುತ ಸಭೆಯಲ್ಲಿ ಶಿವಸೇನೆ ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳಿದೆ ಎಂದು ಹೇಳಲಾಗುತ್ತಿದೆ.
 
ಈ ವಿಚಾರವಾಗಿ ಹಂತ ಹಂತವಾಗಿ ಮಾತುಕತೆ ನಡೆದು ಬರುತ್ತಿದ್ದು, ಇನ್ನು ಕೆಲವೇ ಗಂಟೆಗಳಲ್ಲಿ ಅಧಿಕೃತ ಘೋಷಣೆ ಹೊರಡಿಸಲಾಗುವುದು ಎಂದು ಮೂಲಗಳಿಂದ ತಿಳಿದುಬಂದಿದೆ.
 
ಇದೀಗ ಶಿವಸೇನೆಯ ಮುಖ್ಯಸ್ಥ ಉದ್ದವ್ ಠಾಕ್ರೆ  ಸೇನಾ ಭವನದಲ್ಲಿ ಶಿವಸೇನಾ ಶಾಸಕರೊಂದಿಗೆ ಸಭೆ ನಡೆಸುತ್ತಿದ್ದಾರೆ. ಈ ಸಭೆ ಮುಗಿದ ನಂತರ ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಅಧಿಕೃತ ಘೋಷಣೆಯನ್ನು ಮಾಡಲಾಗುವುದು.
 
ಅದೇ ವೇಳೆ ಈ ಸಭೆಯಲ್ಲಿಯೇ ಶಿವಸೇನೆ ತಮ್ಮ ಶಾಸಕರ ನಾಯಕನನ್ನೂ ಆಯ್ಕೆ ಮಾಡಲಿದೆ.
 
ಬಿಜೆಪಿಯಲ್ಲಿ ಸರ್ಕಾರ ರಚಿಸುವುದಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ರಾಜ್‌ನಾಥ್ ಸಿಂಗ್ ಮತ್ತು ಹಿರಿಯ ನಾಯಕ ಜೆ .ಪಿ ನದ್ದಾ ಇಂದು ಮುಂಬೈಗೆ ಭೇಟಿ ನೀಡಬೇಕಾಗಿತ್ತು. ಆದರೆ ಈ ಭೇಟೆಯನ್ನು ನಾಳೆಗೆ ಮುಂದೂಡಲಾಗಿದೆ.
 
ಈ ಚುನಾವಣೆಯಲ್ಲಿ 41 ಸೀಟುಗಳನ್ನು ಗೆದ್ದಿರುವ ಎನ್‌ಸಿಪಿ, ಬಿಜೆಪಿ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡುವುದಾಗಿ ನಿನ್ನೆ ಹೇಳಿತ್ತು. ಆದರೆ ಎನ್‌ಸಿಪಿ ಜತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ನಿರಾಕರಿಸಿತ್ತು.
 

Share this Story:

Follow Webdunia kannada