Select Your Language

Notifications

webdunia
webdunia
webdunia
webdunia

ಕಂಪೆನಿಗಳ ನೌಕೆಯ ಮೇಲೆ ವಿದೇಶಿ ಧ್ವಜ ಹಚ್ಚಲು ಅನುಮತಿ

ಕಂಪೆನಿಗಳ ನೌಕೆಯ ಮೇಲೆ ವಿದೇಶಿ ಧ್ವಜ ಹಚ್ಚಲು ಅನುಮತಿ
ನವದೆಹಲಿ , ಮಂಗಳವಾರ, 29 ಜುಲೈ 2014 (18:51 IST)
ನರೇಂದ್ರ ಮೋದಿ ಸರ್ಕಾರ ನೌಕೋದ್ಯಮ ಕಂಪೆನಿಗಳಿಗೆ ವಿದೇಶಿ ಹಡಗು ಖರೀದಿಸುವ ಮತ್ತು ತಮ್ಮ ಅನಕೂಲಕರ ರೀತಿಯಲ್ಲಿ ಹಡಗಿನ ಮೇಲೆ ಯಾವುದೇ ದೇಶದ ಧ್ವಜ ಹಚ್ಚುವ ಮತ್ತು ಇದನ್ನು ನೋಂದಾಯಿಸುವ ಅನುಮತಿ ನೀಡಿದೆ. " ಇದರಿಂದ ಭಾರತೀಯ ಕಂಪೆನಿಗಳು ಹೆಚ್ಚುವರಿ ಹಡಗು ಖರೀದಿಸಲು ಅಥವಾ ವಿದೇಶದಲ್ಲಿ ನೊಂದಣಿ ಮಾಡಲು ಸಮರ್ಥವಾಗಲಿದೆ. ಜೊತೆಗೆ ಇವುಗಳನ್ನು ಖರೀದಿಸಲು ವಿದೇಶದಲ್ಲಿ ಇವುಗಳ ಕಂಪೆನಿ ತೆರೆಯುವ ಸಂಭವ ಇರುವುದಿಲ್ಲ" ಎಂದು ನೌಕೋದ್ಯಮ ಸಚಿವಾಲಯ ತಿಳಿಸಿದೆ. 
 
"ಈ ನಿರ್ಧಾರ ಹಡಗು ಕಂಪೆನಿಗಳಿಗೆ ಭಾರತದಲ್ಲಿ ನೊಂದಣಿ ಕಾರ್ಯಾಲಯ ತೆರೆಯಲು ಮತ್ತು ಬೇರೆ ದೇಶಗಳಲ್ಲಿ ಸಹಾಯಕ ಶಾಖೆ ತೆಗೆಯುವುದರ ಬದಲು ಬೇರೆ ಧ್ವಜದ ಮೂಲಕ ನೊಂದಣಿ ಹಡಗುಗಳನ್ನು ಖರೀದಿಸಲು ಪ್ರೋತ್ಸಾಹ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ. 
 
ಈ ನಿರ್ಧಾರದಿಂದ ಸರ್ಕಾರದ ಆದಾಯ ಹೆಚ್ಚುವುದು. ಭಾರತದಲ್ಲಿ ನೊಂದಣಿ ಹಡಗುಗಳನ್ನು ಹೋಲಿಸಿದರೆ ಒಂದು ನಿಶ್ಚಿತ ಸಾಗಾಣಿಕೆಯ ಕ್ಷಮತೆಯ ಮಿತಿಯಲ್ಲಿ ವಿದೇಶದಲ್ಲಿ ಹಡುಗಳನ್ನು ಖರೀದಿಸುವ ಅನುಮತಿ ನೀಡಲಾಗಿದೆ.
 
ಜೊತೆಗೆ  ಈ ಖರೀದಿ ಮೇಲೆ ಒಂದು ನಿಶ್ಚಿತ ಅನುಪಾತದಲ್ಲಿ ಭಾರತೀಯ ಚಾಲಕ ದಳ ಇರಿಸಬಹುದಾಗಿದೆ. ಈ ಶರತ್ತಿನಿಂದ ಸಮುದ್ರ ನಾವಿಕರಿಗೆ ಉದ್ಯೋಗಾವಕಾಶಗಳು ಲಭಿಸಲಿವೆ.

Share this Story:

Follow Webdunia kannada