Webdunia - Bharat's app for daily news and videos

Install App

ಶೀಲಾ ದೀಕ್ಷಿತ್ ರಿಜೆಕ್ಟೆಡ್ ಮಾಲ್‌ನಂತೆ: ಸ್ವಾಮಿ ಪ್ರಸಾದ್ ಮೌರ್ಯ

Webdunia
ಗುರುವಾರ, 4 ಆಗಸ್ಟ್ 2016 (15:08 IST)
ಮುಂದಿನ ವರ್ಷ ನಡೆಯಲಿರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿಯಾದ ಶೀಲಾ ದೀಕ್ಷಿತ್ ವಿರುದ್ಧ ಅಸಭ್ಯ ಪದ ಬಳಸಿದ ಬಿಎಸ್‌ಪಿ ಮುಖಂಡ ಸ್ವಾಮಿ ಪ್ರಸಾದ್ ಮೌರ್ಯ, ಶೀಲಾ ದೀಕ್ಷಿತ್ ತಿರಸ್ಕ್ರತ ವಸ್ತುವಿನಂತೆ ಎಂದು ಹೇಳಿರುವುದು ಇದೀಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
 
ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಭವಿಷ್ಯದ ಕುರಿತಂತೆ ಸುದ್ದಿುಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೌರ್ಯ, ದೀಕ್ಷಿತ್ ರಿಜೆಕ್ಟೆಡ್ ಮಾಲ್‌ನಂತೆ ಎಂದು ಲೇವಡಿ ಮಾಡಿದ್ದಾರೆ.
 
ಹಿರಿಯ ರಾಜಕಾರಣಿಗಳು ಮಹಿಳೆಯರ ಬಗ್ಗೆ ಸೆಕ್ಸಿ ಕಮೆಂಟ್‌ಗಳನ್ನು ನೀಡುತ್ತಿರುವುದು ಇದು ಮೊದಲಲ್ಲ. ಕೆಲ ದಿನಗಳ ಹಿಂದೆ ಬಿಜೆಪಿ ಮುಖಂಡ ದಯಾಶಂಕರ್ ಸಿಂಗ್, ಮಾಯಾವತಿಯನ್ನು ವೇಶ್ಯೆ ಎಂದು ಕರೆದಿರುವುದು ಕೂಡಾ ವಿವಾದಕ್ಕೆ ಕಾರಣವಾಗಿತ್ತು.
 
ಕೆಲವು ತಿಂಗಳುಗಳ ಹಿಂದೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ತಮ್ಮ ಸಹದ್ಯೋಗಿ ಕಾಂಗ್ರೆಸ್ ನಾಯಕಿ ಜಯಂತಿ ನಟರಾಜನ್ ಶೇ.100 ರಷ್ಟು ಟುಂಚ್ ಮಾಲ್ ಎಂದು ಬಣ್ಣಿಸಿದ್ದರು. 
 
ಕೆಸ ದಿನಗಳ ಹಿಂದೆ ಪಕ್ಷದಲ್ಲಿ ಉಸಿರುಗಟ್ಟುತ್ತಿರುವ ವಾತಾವರಣವಿದೆ ಎಂದು ಬಿಎಸ್‌ಪಿ ಪಕ್ಷಕ್ಕೆ ರಾಜೀನಾಮೆ ನೀಡಿದ ಹಿಂದುಳಿದ ವರ್ಗಗಳ ನಾಯಕರಾದ ಸ್ವಾಮಿ ಪ್ರಸಾದ್ ಮೌರ್ಯ, ತಮ್ಮ ಹೇಳಿಕೆಯ ಬಗ್ಗೆ ಪಶ್ಚಾತಾಪವಿಲ್ಲ ಎಂದು ತಿಳಿಸಿದ್ದಾರೆ.
 
ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಪಕ್ಷದ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಮೌರ್ಯ ಆರೋಪಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಕ್‌ಗೆ ಬೆಂಬಲ ಸೂಚಿಸಿದ ಟರ್ಕಿ: ಸೇಬು ಬೆನ್ನಲ್ಲೇ ಆಭರಣಕ್ಕೂ ಭಾರತದಲ್ಲಿ ಬಹಿಷ್ಕಾರ

India Pakistan: ಯಶಸ್ವಿಯಾಗಿ ಪಾಕ್‌ನ 600 ಡ್ರೋನ್‌ಗಳನ್ನು ಉರುಳಿಸಿದ ಭಾರತದ ವಾಯುಪಡೆ

ಉತ್ತರಪ್ರದೇಶ: ಕೂದಲು ಕಸಿ ಮಾಡಲು ಹೋಗಿ ಜೀವ ಕಳೆದುಕೊಂಡ ಇಬ್ಬರು ಎಂಜಿನಿಯರ್‌ಗಳು

ಲಿಂಗಸುಗೂರು: ಜಾಮೀನು ವಿಚಾರಕ್ಕೆ ವಿಷ ಕುಡಿಸಿ ವ್ಯಕ್ತಿಯ ಕೊಲೆ, 10ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಪ್ರೀತಿಸಿ ಮದುವೆಯಾದ ಹಿಂದೂ ಯುವಕ- ಮುಸ್ಲಿಂ ಯುವತಿ, ರಕ್ಷಣೆ ಕೋರಿದ ನವಜೋಡಿ

ಮುಂದಿನ ಸುದ್ದಿ
Show comments