Select Your Language

Notifications

webdunia
webdunia
webdunia
webdunia

ಶೀನಾ-ಇಂದ್ರಾಣಿ ಈಮೇಲ್ 'ಜಗಳ'ದ ತನಿಖೆ

ಶೀನಾ-ಇಂದ್ರಾಣಿ ಈಮೇಲ್ 'ಜಗಳ'ದ ತನಿಖೆ
ಮುಂಬೈ , ಬುಧವಾರ, 2 ಸೆಪ್ಟಂಬರ್ 2015 (10:40 IST)
ಶೀನಾ ಬೋರಾ ಕೊಲೆ ಪ್ರಕರಣ ದಿನದಿನಕ್ಕೆ ಕಗ್ಗಂಟಾಗುತ್ತಿದ್ದು ಮುಂಬೈ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಕಾರ್ ಚಾಲಕ ಮತ್ತು ಮಾಜಿ ಪತಿ ಶೀನಾ ಕೊಲೆಗೈದಿರುವುದನ್ನು ಒಪ್ಪಿಕೊಂಡಿದ್ದರೂ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿರುವ ಇಂದ್ರಾಣಿ ಮಾತ್ರ ಈಗಲೂ ಮಗಳು ಅಮೇರಿಕದಲ್ಲಿದ್ದಾಳೆ ಎಂದು ವಾದಿಸುತ್ತಿದ್ದಾಳೆ. ಹೀಗಾಗಿ ಪೊಲೀಸರು ಸತ್ಯವನ್ನು ಕಂಡುಕೊಳ್ಳಲು ಇರುವ ಎಲ್ಲ ಮೂಲಗಳನ್ನು ಜಾಲಾಡುತ್ತಿದ್ದಾರೆ. 
 

 
2012ರ ಎಪ್ರಿಲ್ 24 ರಂದು ಶೀನಾ ಹತ್ಯೆಯಾಗುವ ಕೆಲ ಗಂಟೆಗಳ ಮುನ್ನ ಆರೋಪಿ ಇಂದ್ರಾಣಿ ಮತ್ತು ಶೀನಾ ನಡುವೆ ಮಧ್ಯೆ ಕನಿಷ್ಠ 20 ಬಿಸಿ ಬಿಸಿ  ಈಮೇಲ್ ಸಂಭಾಷಣೆಗಳ ವಿನಿಮಯವಾಗಿರುವುದು ಪತ್ತೆಯಾಗಿದೆ. ಈ ಈಮೇಲ್ ಸಂದೇಶಗಳು ಪ್ರಕರಣಕ್ಕೆ ಪ್ರಮುಖ ಸಾಕ್ಷ್ಯಗಳಾಗಲಿವೆ ಎಂದು ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ.
 
ಈ ಮಧ್ಯೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತರೊಬ್ಬರು ಶೀನಾಳದೆನ್ನಲಾದ ಶವ ಪತ್ತೆಯಾದ ರಾಯ್‌ಘಡ್‌ನ ಅರಣ್ಯ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕನಿಷ್ಠ 6 ಶವಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ. 

Share this Story:

Follow Webdunia kannada