Select Your Language

Notifications

webdunia
webdunia
webdunia
webdunia

ಶೀನಾ ಸತ್ತಿಲ್ಲ, ಅಮೇರಿಕದಲ್ಲಿದ್ದಾಳೆ!

ಶೀನಾ ಸತ್ತಿಲ್ಲ, ಅಮೇರಿಕದಲ್ಲಿದ್ದಾಳೆ!
ಮುಂಬೈ , ಮಂಗಳವಾರ, 1 ಸೆಪ್ಟಂಬರ್ 2015 (11:47 IST)
ಹಲವು ದಿನಗಳಿಂದ ದೇಶಾದ್ಯಂತ ಸಂಚಲನವನ್ನು ಮೂಡಿಸಿರುವ ಶೀನಾ ಬೋರಾ ಹತ್ಯೆ ಪ್ರಕರಣ ಕ್ಷಣಕ್ಷಣಕ್ಕೂ ಹಲವು ತಿರುವುಗಳನ್ನು ಪಡೆಯುತ್ತ ಸಾಗುತ್ತಿದೆ. ಶೀನಾ ಹತ್ಯೆ ಮಾಡಿದ್ದಾಗಿ ಕಾರ್ ಚಾಲಕ ಮತ್ತು ಇಂದ್ರಾಣಿ ಮಾಜಿ ಪತಿ ಒಪ್ಪಿಕೊಂಡಿದ್ದರೂ ಸ್ವತಃ ಇಂದ್ರಾಣಿ ಮಾತ್ರ ಇನ್ನುವರೆಗೂ ತನ್ನ ತಪ್ಪನ್ನು ಒಪ್ಪಿಕೊಂಡಿಲ್ಲ.
 

 
ಆರೋಪಿಗಳ ವಿಚಾರಣೆ ಮುಂದುವರೆದಿದ್ದು ನಿನ್ನೆ ನಡೆದ ವಿಚಾರಣೆ ಸಂದರ್ಭದಲ್ಲಿ ಸಹ ಇಂದ್ರಾಣಿ ಶೀನಾ ಸತ್ತಿಲ್ಲ. ಆಕೆ ಅಮೆರಿಕದಲ್ಲಿದ್ದಾಳೆ ಎಂದು ವಾದಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. 
 
"ಶೀನಾ ಬದುಕಿದ್ದಾಳೆ. ಆಕೆ ಅಮೇರಿಕದಲ್ಲಿ ನೆಲೆಯೂರಿದ್ದಾಳೆ. ಆಕೆಗೆ ನಾನು ಎಂದರೆ ಇಷ್ಟವಿಲ್ಲ. ಹೀಗಾಗಿ ಆಕೆ ಸತ್ತಿದ್ದಾಳೆ ಎಂದು ಮೊಕದ್ದಮೆ ದಾಖಲಾಗಿದ್ದರೂ ರಹಸ್ಯವನ್ನು ಬಹಿರಂಗ ಪಡಿಸಲು ಆಕೆ  ಬರುತ್ತಿಲ್ಲ", ಎಂದು ಇಂದ್ರಾಣಿ ಮುಖರ್ಜಿ ಪೊಲೀಸ್ ತನಿಖೆಯ ವೇಳೆ ಹೇಳಿದ್ದಾಳೆ.
 
ತನ್ನ ಹೇಳಿಕೆಯ ಬಗ್ಗೆ ಅಚಲಳಾಗಿರುವ ಇಂದ್ರಾಣಿ ಬಾಯಿಂದ ಸತ್ಯ ಹೊರ ಹಾಕಿಸುವುದು ಕಠಿಣವಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಈ ಮಧ್ಯೆ ತಾನು ಸಿದ್ಧಾರ್ಥ್ ದಾಸ್ ಎಂದು ಹೇಳಿಕೊಳ್ಳುತ್ತಿರುವ ವ್ಯಕ್ತಿಯೊಬ್ಬ ಹತ್ಯೆಯಾದ ಶೀನಾ ಮತ್ತು ಆಕೆಯ ಸಹೋದರ ಮಿಖೈಲ್ ನನ್ನ ಮಕ್ಕಳು ಎಂದು ಹೇಳಿಕೊಂಡಿದ್ದಾನೆ.

Share this Story:

Follow Webdunia kannada