Webdunia - Bharat's app for daily news and videos

Install App

ಟೆರೆಸ್‌ ಮೇಲಿಂದ ಗಂಡನನ್ನು ಕೆಳಕ್ಕೆ ದೂಡಿ ಹಾಕಿದ ಪತ್ನಿ

Webdunia
ಮಂಗಳವಾರ, 16 ಸೆಪ್ಟಂಬರ್ 2014 (12:04 IST)
ಹೆಂಡತಿಯೇ ಗಂಡನನ್ನು ಟೆರೆಸ್ ಮೇಲಿಂದ ದೂಡಿ ಹಾಕಿ ಕೊಲ್ಲಲೆತ್ನಿಸಿದ ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದ್ದು, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ.

ಜಿಲ್ಲೆಯ ವಿಜಯನಗರದಲ್ಲಿ ಭಾನುವಾರ ರಾತ್ರಿ ನಡೆದ ಘಟನೆಯಲ್ಲಿ  ತಮ್ಮ ಮನೆಯ ಮಹಡಿಯ ಮೇಲೆ ನಿಂತುಕೊಂಡು ಮೊಬೈಲ್ ಸಂಭಾಷಣೆಯಲ್ಲಿ ತೊಡಗಿದ್ದ ಗಂಡ ಅಮಿತ್‌ನನ್ನು ಪತ್ನಿ ಪೂಜಾ( 30) ದೂಡಿ ಹಾಕಿದ್ದಾಳೆ ಎಂದು ಪೋಲಿಸರು ತಿಳಿಸಿದ್ದಾರೆ. 
 
ಅಮಿತ್ ಪೋನ್ ಸಂಭಾಷಣೆಯಲ್ಲಿ ನಿರತನಾಗಿದ್ದ ವೇಳೆ ಅಲ್ಲಿಗೆ ಆಗಮಿಸಿದ ಪೂಜಾ ಆತನ ಜತೆ ವಾಗ್ವಾದಕ್ಕಿಳಿದಿದ್ದಾಳೆ. ಆತನಿಗೆ ಗದರಿಸಿದ  ಆಕೆ, ಆತನ ಬೆನ್ನ ಹಿಂದಿನಿಂದ ಒದ್ದಿದ್ದಾಳೆ. ಪರಿಣಾಮ ಆತ 12 ಅಡಿ ಕೆಳಗೆ ಬಿದ್ದಿದ್ದಾನೆ. 
 
ತೀವೃ ಚಿಂತಾಜನಕ ಸ್ಥಿತಿಯಲ್ಲಿದ್ದ ಅವನನ್ನು ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. 
 
ಈಗ ಪ್ರಜ್ಞೆಗೆ ಮರಳಿರುವ ಮಾತನಾಡಲು ಶಕ್ತನಾಗಿದ್ದಾನೆ. ಆತ ಅಪಾಯದಿಂದ ಪಾರಾಗಿದ್ದಾನೆ, ಆದರೆ ಎಕ್ಸರೆ ವರದಿ ಇನ್ನೂ ಬರಬೇಕಿದೆ ಎಂದು ಪೋಲಿಸ್ ಅಧಿಕಾರಿ ಜೆ. ಆರ್ ಜೋಶಿ ತಿಳಿಸಿದ್ದಾರೆ. 
 
ನಾವು ಆತನ ಪತ್ನಿಗೆ ದೂರವಾಣಿ ಕರೆ ಮಾಡಿದ್ದೆವು. ಆದರೆ ಆಕೆ ಸಂಪರ್ಕಕ್ಕೆ ಸಿಗುತ್ತಿಲ್ಲ.  ಆಕೆ ಪರಾರಿಯಾಗಿರಬೇಕು. ಆಕೆಯ ಈ ಕೃತ್ಯಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ.  ಪೀಡಿತ ಹೇಳಿಕೆಯನ್ನು ದಾಖಲಿಸಲು ಸಮರ್ಥನಾದ ನಂತರ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಜೋಶಿ ಹೇಳಿದ್ದಾರೆ.
 
ದಂಪತಿಗಳಿಗೆ ಮೂವರು ಮಕ್ಕಳಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments