Select Your Language

Notifications

webdunia
webdunia
webdunia
webdunia

ಬಿಹಾರ್ ಚುನಾವಣೆ: ಶತ್ರುಘ್ನ ಸಿನ್ಹಾ ಪತ್ನಿ ಪೂನಮ್‌ ಜೆಡಿಯು ಟಿಕೆಟ್‌ನಿಂದ ಕಣಕ್ಕೆ

ಬಿಹಾರ್ ಚುನಾವಣೆ: ಶತ್ರುಘ್ನ ಸಿನ್ಹಾ ಪತ್ನಿ ಪೂನಮ್‌ ಜೆಡಿಯು ಟಿಕೆಟ್‌ನಿಂದ ಕಣಕ್ಕೆ
ನವದೆಹಲಿ , ಸೋಮವಾರ, 3 ಆಗಸ್ಟ್ 2015 (15:27 IST)
ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಾಯಕ ಮಾಜಿ ಕೇಂದ್ರ ಸಚಿವ ಶತ್ರುಘ್ನ ಸಿನ್ಹಾ ಪತ್ನಿ ಪೂನಂ ಅವರನ್ನು ಜೆಡಿಯು ಪಕ್ಷದಿಂದ ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.   
 
ಶತ್ರುಘ್ನ ಸಿನ್ಹಾ ಅವರ ಪತ್ನಿ ಪೂನಮ್‌ರನ್ನು ಬಂಕಿಪುರಾ ಅಥವಾ ದಿಘಾ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಜೆಡಿಯು ಬಹಿರಂಗ ಪ್ರಸ್ತಾವನೆ ಸಲ್ಲಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
 
ಇಲ್ಲಿಯವರೆಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲವಾದರೂ ಇತ್ತೀಚೆಗೆ ಬಿಹಾರ್ ಸಿಎಂ ಮತ್ತು ಸಿನ್ಹಾ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿ ಪರಸ್ಪರ ಮಾತುಕತೆ ನಡೆಸಿದ್ದರಿಂದ ವರದಿಗಳಿಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.
 
ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಬಿಜೆಪಿಯನ್ನು ತೊರೆದು ಜೆಡಿಯು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನುವ ವರದಿಗಳನ್ನು ನಿತೀಶ್ ಕುಮಾರ್ ಮತ್ತು ಶತ್ರುಘ್ನ ಸಿನ್ಹಾ ತಳ್ಳಿಹಾಕಿದ್ದಾರೆ. 
 

Share this Story:

Follow Webdunia kannada