Select Your Language

Notifications

webdunia
webdunia
webdunia
webdunia

ಮಾಧ್ಯಮದವರನ್ನು ಹೀನಾಯವಾಗಿ ನಿಂದಿಸಿದ ಶಶಿ ಥರೂರ್

ಮಾಧ್ಯಮದವರನ್ನು ಹೀನಾಯವಾಗಿ ನಿಂದಿಸಿದ ಶಶಿ ಥರೂರ್
ತಿರುವನಂತಪುರಮ್ , ಗುರುವಾರ, 21 ಮೇ 2015 (12:58 IST)
ಕಾಂಗ್ರೆಸ್ ವರಿಷ್ಠ ಶಶಿ ಥರೂರ್ ಬುಧವಾರ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ. ಮಾಧ್ಯಮದವರು ಸುಳ್ಳುಗಾರರು ಮತ್ತು ತುಚ್ಛರು ಎಂದು ಅವರು ಹೀಗಳೆದಿದ್ದಾರೆ. 














ಅವರ ಪತ್ನಿ ಸುನಂದಾ ಪುಷ್ಕರ್ ಸಾವಿಗೆ ಸಂಬಂಧಿಸಿದಂತೆ ಥರೂರ್ ಆಪ್ತರು ಯಾಕೆ ಸುಳ್ಳು ಹೇಳುತ್ತಿದ್ದಾರೆ. ಹಲವು ಸತ್ಯಗಳನ್ನು ಮುಚ್ಚಿಡುತ್ತಿದ್ದಾರೆ ಎಂದು ಪ್ರಶ್ನಿಸಿದಾಗ ಏಕಾಯಿಕಿ ಗರಂ ಆದ ಥರೂರ್ "ನಾನು ಈ ಪ್ರಕರಣದ ಕುರಿತು ಪೊಲೀಸರ ಜತೆ ಮಾತನಾಡುತ್ತೇನೆ. ಅವರ ವಿಚಾರಣೆಗೆ ಸ್ಪಂದಿಸುತ್ತೇನೆ. ಕಪೋಲಕಲ್ಪಿತ ಸುಳ್ಳು ಸೃಷ್ಟಿಸುವ, ಕೀಳು ಮಟ್ಟದಲ್ಲಿ ವರ್ತಿಸುವವರಿಗೆ ( ಮಾಧ್ಯಮ) ಉತ್ತರಿಸಲು ಬಯಸುವುದಿಲ್ಲ", ಎಂದು ಥರೂರ್ ಆಕ್ರೋಶ ವ್ಯಕ್ತಪಡಿಸಿದರು. 
 
"ಸುನಂದಾ ಸಾವಿನ ಕುರಿತಂತೆ ಮಾಧ್ಯಮದವರು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಸೃಷ್ಟಿಸಿದರು. ಅದನ್ನೆಲ್ಲ ನಾನು ಸಹಿಸಿಕೊಂಡೆ. ಆದರೆ ಈಗ ನನ್ನ ಸಹನೆ ಕಟ್ಟೆ ಒಡೆದಿದೆ", ಎಂದು ಅವರು ಕಿಡಿಕಾರಿದರು.
 
ಮಾಜಿ ಕೇಂದ್ರ ಸಚಿವ ಸುನಂದಾ ಪುಷ್ಕರ್ ಅವರ ಅನುಮಾನಾಸ್ಪದ ಸಾವಿಗೆ ಸಂಬಂಧಿಸಿದಂತೆ  ಮೂವರು ಪ್ರಮುಖ ಸಾಕ್ಷಿಗಳಿಗೆ ಸುಳ್ಳು ಪತ್ತೆ ಪರೀಕ್ಷೆ ನಡೆಸಲು ದೆಹಲಿ ಹೈಕೋರ್ಟ್ ಬುಧವಾರ ಒಪ್ಪಿಗೆ ಸೂಚಿಸಿದೆ. ಥರೂರ್ ಅವರ ಮನೆಗೆಲಸದ ಆಳು ನರೇನ್ ಸಿಂಗ್, ಚಾಲಕ ಭಜರಂಗಿ ಮತ್ತು ಕುಟುಂಬದ ಆಪ್ತ ಸಂಜಯ್ ದೇವನ್  ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ದೆಹಲಿ ಪೊಲೀಸರು ಕೋರ್ಟ್ ಅನುಮತಿಯನ್ನು ಕೇಳಿದ್ದರು. ಕೆಲವೊಂದು ಪ್ರಶ್ನೆಗೆ ಮೌನವನ್ನು ಕಾಯ್ದುಕೊಳ್ಳುತ್ತಿದ್ದಾರೆ ಅಥವಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹಳಷ್ಟು ಸತ್ಯಗಳನ್ನು ಮರೆಮಾಚುತ್ತಿದ್ದಾರೆ ಎಂಬುದು ಪೊಲೀಸರ ಅನುಮಾನ. ಈ ಮೂವರನ್ನು ಒಂದಕ್ಕಿಂತ ಹೆಚ್ಚು ಬಾರಿ ಪ್ರಶ್ನಿಸಲಾಗಿದ್ದು. ತಮ್ಮ ಸಂಶಯಕ್ಕೆ ಪೂರಕವಾದ ಅಂಶಗಳನ್ನು ಸಹ ಪೊಲೀಸರು ಪಟ್ಟಿ ಮಾಡಿದ್ದಾರೆ. ಈ ಮೂವರು ಥರೂರ್ ಕುಟುಂಬದ ನಿಕಟವರ್ತಿಗಳಾಗಿದ್ದಾರೆ.  ಈ ಕುರಿತು ಪ್ರಶ್ನೆ ಕೇಳಿದ್ದಕ್ಕೆ ಥರೂರ್ ಮಾಧ್ಯಮದವರ ವಿರುದ್ಧ ಸ್ಪೋಟಿಸಿದ್ದಾರೆ. 
 

Share this Story:

Follow Webdunia kannada