Select Your Language

Notifications

webdunia
webdunia
webdunia
webdunia

ಮಹಿಳಾ ಜಿಮ್ನಾಸ್ಟ್ ಪಟುಗೆ ಲೈಂಗಿಕ ಕಿರುಕುಳದ ಆರೋಪ

ಮಹಿಳಾ ಜಿಮ್ನಾಸ್ಟ್  ಪಟುಗೆ ಲೈಂಗಿಕ ಕಿರುಕುಳದ ಆರೋಪ
ನವದೆಹಲಿ , ಬುಧವಾರ, 17 ಸೆಪ್ಟಂಬರ್ 2014 (11:03 IST)
ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಮಹಿಳಾ ಜಿಮ್ನಾಸ್ಟಿಕ್ ಪಟುಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ರಾಷ್ಟ್ರೀಯ ಜಿಮ್ನಾಸ್ಟ್ ಕೋಚ್ ಮತ್ತು ಒಬ್ಬರು ಜಿಮ್ಮಾಸ್ಟ್ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಮುಂಬರುವ ಏಷ್ಯಾ ಕ್ರೀಡಾಕೂಟಕ್ಕಾಗಿ ರಾಷ್ಟ್ರೀಯ ಶಿಬಿರದಲ್ಲಿ ಇಬ್ಬರೂ ಆರೋಪಿಗಳು ಭಾಗವಹಿಸಿದ್ದರು.

ಮನೋಜ್ ರಾಣಾ ಮತ್ತು ಚಂದನ್ ಪಾಠಕ್ ಇಬ್ಬರ ಮೇಲೂ ಮಹಿಳೆಯ ಶೀಲ ಕೆಣಕಿದ ಆರೋಪ ಹೊರಿಸಲಾಗಿದೆ. 29 ವರ್ಷ ವಯಸ್ಸಿನ ಸಂತ್ರಸ್ತೆ ಐಪಿ ಎಸ್ಟೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸಂತ್ರಸ್ತೆ ನೀಡಿರುವ ದೂರಿನಲ್ಲಿ, ಕೋಚ್ ಮನೋಜ್ ರಾಣಾ ತರಬೇತಿ ಶಿಬಿರದ ಸಂದರ್ಭದಲ್ಲಿ ಅಸಭ್ಯ ಭಾಷೆಯನ್ನು ಬಳಸಿದರು ಮತ್ತು ಚಂದನ್ ಪಾಠಕ್  ಅವರ ವಿರುದ್ಧ ಅಶ್ಲೀಲ ಕಾಮೆಂಟ್ ಮಾಡಿದ್ದ.ಈ ಘಟನೆಯ ಬಗ್ಗೆ ಮಹಿಳೆ ತನ್ನ ಕೋಚ್‌ಗಳಿಗೆ ಮಾಹಿತಿ ನೀಡಿದ್ದಳು. 

Share this Story:

Follow Webdunia kannada