Select Your Language

Notifications

webdunia
webdunia
webdunia
webdunia

ಹೆಣ್ಣು ಭ್ರೂಣಹತ್ಯೆ ತಡೆಗೆ ಲಿಂಗಪತ್ತೆ ಅವಶ್ಯ: ಮೇನಕಾ ಗಾಂಧಿ

ಹೆಣ್ಣು ಭ್ರೂಣಹತ್ಯೆ ತಡೆಗೆ ಲಿಂಗಪತ್ತೆ ಅವಶ್ಯ: ಮೇನಕಾ ಗಾಂಧಿ
ನವದೆಹಲಿ , ಮಂಗಳವಾರ, 2 ಫೆಬ್ರವರಿ 2016 (16:10 IST)
ಹೆಣ್ಣು ಭ್ರೂಣಹತ್ಯೆ ವ್ಯಾಪಕವಾಗಿ ಹೆಚ್ಚುತ್ತಿರುವುದರಿಂದ ಅದಕ್ಕೆ ಕಡಿವಾಣ ಹಾಕಲು ಲಿಂಗ ಪತ್ತೆ ಕಡ್ಡಾಯಗೊಳಿಸಬೇಕಾದ ಅಗತ್ಯವಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಸಲಹೆ ನೀಡಿದರು.

ಜೈಪುರದಲ್ಲಿ ನಡೆದ ಅಖಿಲ ಭಾರತ ಪ್ರಾದೇಶಿಕ ಸಂಪಾದಕ ಸಮ್ಮೇಳನದಲ್ಲಿ ಮಾತನಾಡುತ್ತಾ, ನನ್ನ ವೈಯಕ್ತಿಕ ದೃಷ್ಟಿಕೋನದ ಪ್ರಕಾರ ಮಗುವಿಗೆ ಜನ್ಮ ನೀಡಲಿರುವ ತಾಯಿಗೆ ಅದು ಹೆಣ್ಣೋ ಅಥವಾ ಗಂಡು ಎಂಬುದನ್ನು ಕಡ್ಡಾಯವಾಗಿ ಹೇಳಲೇಬೇಕು. ಗರ್ಭಿಣಿ ಹಾಗೂ ಆಕೆಯ ಇನ್ನೂ ಹುಟ್ಟದ ಮಗುವನ್ನು ನೋಂದಾವಣೆಯನ್ನು ಮಾಡುವಂತಹ ವ್ಯವಸ್ಥೆಯನ್ನು ರೂಪಿಸುವ ಬಗ್ಗೆ ಕೇಂದ್ರ ಸರಕಾರವೀಗ ಚರ್ಚೆ ನಡೆಸುತ್ತಿದೆ. ಇಂತಹ ವ್ಯವಸ್ಥೆಯ ಮೂಲಕ ಅಧಿಕಾರಿಗಳಿಗೆ ಮಗು ಹಾಗೂ ಅದರ ಹೆತ್ತವರ ಮೇಲೆ ಕಣ್ಣಿಡಲು ಸಾಧ್ಯವಾಗುತ್ತದೆ ಎಂದು ಮೇನಕಾ ಹೇಳಿದರು.
 
ನಾನು ಈ ಯೋಚನೆಯನ್ನು ಕೇವಲ ಹಂಚಿಕೊಳ್ಳುತ್ತಿದ್ದೇನೆ. ಈ ಕುರಿತು ಚರ್ಚೆ ಮಾಡಿ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಬೇಕಷ್ಟೆ.  ಹೆಣ್ಣು ಭ್ರೂಣ ಹತ್ಯೆ ಸಮಸ್ಯೆ ಕುರಿತು ಅವಲೋಕಿಸಲು ಇದೊಂದು ವಿಭಿನ್ನ ಐಡಿಯಾವಾಗಿದ್ದು, ಈ ಮೂಲಕ ಸಮಸ್ಯೆಯನ್ನು ಪರಿಹರಿಸಲು ಸುಲಭವಾಗಬಹುದು ಎಂದು ಗಾಂಧಿ ಅಭಿಪ್ರಾಯ ಪಟ್ಟಿದ್ದಾರೆ.
 
"ನಾವು (ಅಕ್ರಮ) ಅಲ್ಟ್ರಾಸೌಂಡ್ ಮಾಡುವವರನ್ನು ಹಿಡಿಯುತ್ತಾ ಇರುವುದು ಸಾಧ್ಯವಿಲ್ಲ,  ಇಂತಹ ಜನರನ್ನು ಬಂಧನಕ್ಕೆ ಒಳಪಡಿಸುವುದು ಶಾಶ್ವತ ಪರಿಹಾರ ಅಲ್ಲ", ಎಂದು ಕೇಂದ್ರ ಸಚಿವೆ ತಿಳಿಸಿದ್ದಾರೆ. 
 

Share this Story:

Follow Webdunia kannada