Select Your Language

Notifications

webdunia
webdunia
webdunia
webdunia

ಸೆನ್ಸೆಕ್ಸ್: ಭಾರಿ ಚೇತರಿಕೆ ಕಂಡ ಶೇರುಸಂವೇದಿ ಸೂಚ್ಯಂಕ

ಸೆನ್ಸೆಕ್ಸ್: ಭಾರಿ ಚೇತರಿಕೆ ಕಂಡ ಶೇರುಸಂವೇದಿ ಸೂಚ್ಯಂಕ
ಮುಂಬೈ: , ಶುಕ್ರವಾರ, 31 ಜುಲೈ 2015 (14:42 IST)
ಹೂಡಿಕೆದಾರರು ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 260 ಪಾಯಿಂಟ್‌ಗಳ ಏರಿಕೆ ಕಂಡಿದೆ.
 
ಕಳೆದ ಎರಡು ದಿನಗಳ ವಹಿವಾಟಿನಲ್ಲಿ 246.12 ಪಾಯಿಂಟ್‌ಗಳ ಚೇತರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 260.17 ಪಾಯಿಂಟ್‌ಗಳ ಏರಿಕೆ ಕಂಡು 27,965.52 ಅಂಕಗಳಿಗೆ ತಲುಪಿದೆ.
 
ರಿಯಲ್ಟಿ, ಹೆಲ್ತ್‌ಕೇರ್, ವಾಹನೋದ್ಯಮ ಕ್ಷೇತ್ರದ ಶೇರುಗಳು ವಹಿವಾಟಿನಲ್ಲಿ ಭಾರಿ ಲಾಭದತ್ತ ಸಾಗಿವೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 
ಅದರಂತೆ, ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ 83.85 ಪಾಯಿಂಟ್‌ಗಳ ಏರಿಕೆ ಕಂಡು 8,458.90 ಅಂಕಗಳಿಗೆ ತಲುಪಿದೆ.
 
ಜಪಾನ್‌ನ ನಿಕೈ ಶೇರುಪೇಟೆ ಸೂಚ್ಯಂಕ ಶೇ.0.12 ರಷ್ಟು ಚೇತರಿಕೆಯಾಗಿದೆ. ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.0.44 ರಷ್ಟು ಏರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
 

Share this Story:

Follow Webdunia kannada