Select Your Language

Notifications

webdunia
webdunia
webdunia
webdunia

ಲಾಭದಾಯಕ ವಹಿವಾಟಿನಿಂದ ಶೇರುಪೇಟೆ ಸಂವೇದಿ ಸೂಚ್ಯಂಕ ಕುಸಿತ

ಲಾಭದಾಯಕ ವಹಿವಾಟಿನಿಂದ ಶೇರುಪೇಟೆ ಸಂವೇದಿ ಸೂಚ್ಯಂಕ ಕುಸಿತ
ಮುಂಬೈ , ಶುಕ್ರವಾರ, 19 ಫೆಬ್ರವರಿ 2016 (13:54 IST)
ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನ ಪ್ರಭಾವ ದೇಶಿಯ ಶೇರುಪೇಟೆಯ ಮೇಲೆ ಬೀರಿದ ಹಿನ್ನೆಲೆಯಲ್ಲಿ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 141 ಪಾಯಿಂಟ್‌ಗಳ ಕುಸಿತ ಕಂಡಿದೆ.
 
ಹೂಡಿಕೆದಾರರು ಲಾಭದಾಯಕ ವಹಿವಾಟಿಗೆ ಮೊರೆಹೋಗಿದ್ದರಿಂದ ಶೇರುಪೇಟೆಯ ಸೂಚ್ಯಂಕ 140.86 ಪಾಯಿಂಟ್‌ಗಳ ಇಳಿಕೆ ಕಂಡು 23,508.36 ಅಂಕಗಳಿಗೆ ತಲುಪಿದೆ.
 
ಉಕ್ಕು, ಬಂಡವಾಳ ವಸ್ತುಗಳು, ಪಿಎಸ್‌ಯು, ತೈಲ ಮತ್ತು ಅನಿಲ ಕ್ಷೇತ್ರಗಳ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ ಕಂಡ ಹಿನ್ನೆಲೆಯಲ್ಲಿ ನಿನ್ನೆ ಶೇರುಪೇಟೆ ವಹಿವಾಟಿನ ಮುಕ್ತಾಯಕ್ಕೆ 457.25 ಪಾಯಿಂಟ್‌ಗಳ ಚೇತರಿಕೆ ಕಂಡಿತ್ತು.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 45.80 ಪಾಯಿಂಟ್‌ಗಳ ಇಳಿಕೆ ಕಂಡು 7,145.95 ಅಂಕಗಳಿಗೆ ತಲುಪಿದೆ.
 
ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನ ಪ್ರಭಾವ ಹಾಗೂ ಹೂಡಿಕೆದಾರರು ಶೇರುಗಳ ಖರೀದಿಗೆ ಕಾದು ನೋಡುವ ತಂತ್ರ ಅನುಸರಿಸಿದ್ದರಿಂದ ಶೇರುಪೇಟೆ ಸೂಚ್ಯಂಕ ಕುಸಿತ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ. 
 
ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.0.53 ರಷ್ಟು ಇಳಿಕೆ ಕಂಡಿದೆ. ಜಪಾನ್‌ನ ನಿಕೈ ಶೇರುಪೇಟೆ ಸೂಚ್ಯಂಕ ಶೇ.2.23 ರಷ್ಟು ಕುಸಿತ ಕಂಡಿದೆ. ಶಾಂಘೈ ಶೇರುಪೇಟೆ ಶೇ.0.58 ರಷ್ಟು ಇಳಿಕೆಯಾಗಿದೆ. 
 
ಅಮೆರಿಕದ ಡೊ ಜೊನ್ಸ್ ಶೇರುಪೇಟೆ ನಿನ್ನೆಯ ವಹಿವಾಟಿನ ಮುಕ್ತಾಯಕ್ಕೆ ಶೇ.0.25 ರಷ್ಟು ಇಳಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

Share this Story:

Follow Webdunia kannada