ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಪದಗ್ರಹಣ ಮಾಡಲು ಇದು ಸೂಕ್ತ ಸಮಯ ಎಂದು ಕಾಂಗ್ರೆಸ್ ಹಿರಿಯ ನಾಯಕಿ, ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹೇಳಿದ್ದಾರೆ. ಅಷ್ಟೆ ಅಲ್ಲದೇ ಒಂದು ವೇಳೆ ರಾಹುಲ್ ಯುವ ತಂಡವನ್ನು ಕಟ್ಟ ಬಯಸಿದರೆ ಅದನ್ನು ತುಂಬು ಮನಸ್ಸಿನಿಂದ ಸ್ವಾಗತಿಸಿ ಅಧಿಕಾರದಿಂದ ಕೆಳಗಿಳಿಯಲು ಹಿರಿಯ ನಾಯಕರು ಸಿದ್ಧ ಎಂದವರು ಘೋಷಿಸಿದ್ದಾರೆ.
ರಾಷ್ಟ್ರೀಯ ಸುದ್ದಿ ಮಾಹಿನಿಯೊಂದಕ್ಕೆ ಸಂದರ್ಶನ ನೀಡಿ ಮಾತನಾಡುತ್ತಿದ್ದ ಅವರು, ರಾಹುಲ್ ಗಾಂಧಿಗೆ ಪಕ್ಷದ ಸಾರಥ್ಯ ನೀಡುವುದು ಪಕ್ಷ ನಿರ್ಧರಿಸಿದ ವಿಚಾರ ಎಂದನಿಸುತ್ತದೆ. ರಾಹುಲ್ ಅಧಿಕಾರ ಸ್ವೀಕರಿಸಲು ಇದು ಸೂಕ್ತ ಸಮಯ. ಒಂದು ವೇಳೆ ಈ ನಿರ್ಧಾರ ತೆಗೆದುಕೊಂಡಿದ್ದೇ ಆದರೆ ಅದರ ತ್ವರಿತ ಅನುಷ್ಠಾನ ಕೂಡ ಅಷ್ಟೇ ಮುಖ್ಯವಾಗುತ್ತದೆ. ಈ ಆಯ್ಕೆ ಸೋನಿಯಾ ಗಾಂಧಿ ಅವರಿಗೆ ಬಿಟ್ಟಿದ್ದು ಎಂದು ಅವರು ಹೇಳಿದ್ದಾರೆ.
ಬಿಹಾರ ವಿಧಾನ ಸಭೆ ಚುನಾವಣೆಯಲ್ಲಿ ಮಹಾಮೈತ್ರಿಕೂಟದ ಜತೆ ಕೈ ಜೋಡಿಸಿದ ರಾಹುಲ್ ಗಾಂಧಿ ಅವರ ತಂತ್ರಗಾರಿಗೆಯನ್ನು ಪ್ರಶಂಶಿಸಿ ಮಾತನಾಡಿದ ಅವರು, ಈ ನಡೆಯನ್ನಿಟ್ಟಿದ್ದು ರಾಹುಲ್ ಗಾಂದಿ ಮತ್ತು ಇದು ಯಶಸ್ವಿಯಾಗಿದೆ ಕೂಡ ಎಂದಿದ್ದಾರೆ.
ರಾಹುಲ್ ಗಾಂಧಿ ಕೆಲವು ತಪ್ಪುಗಳನ್ನು ಸಹ ಮಾಡಿದ್ದಾರೆ ಎಂಬುದನ್ನು ಸಹ ಅವರು ಒಪ್ಪಿಕೊಂಡಿದ್ದಾರೆ. ರಾಹುಲ್ ಕೆಲ ತಪ್ಪುಗಳನ್ನು ಮಾಡಿರಬಹುದು. ಆದರೆ ಅದರಿಂದ ಅವರು ಪಾಠ ಕಲಿತಿದ್ದಾರೆ. ಒಂದು ವೇಳೆ ಅವರು ಯುವ ತಂಡವನ್ನು ಕಟ್ಟ ಬಯಸುತ್ತಾರೆ ಎಂದರೆ ಆ ನಿರ್ಧಾರವನ್ನು ಒಪ್ಪಿಕೊಳ್ಳಲು ನಾವು ಹಿರಿಯ ನಾಯಕರು ಸಿದ್ಧರಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.