Select Your Language

Notifications

webdunia
webdunia
webdunia
webdunia

ತಂದೆ, ಮಗನ ನಿರಂತರ ಅತ್ಯಾಚಾರದಿಂದ ಹೆಣ್ಣು ಮಗುವಿಗೆ ಜನ್ಮ ನೀಡಿದ 14ರ ಬಾಲಕಿ

ತಂದೆ, ಮಗನ ನಿರಂತರ ಅತ್ಯಾಚಾರದಿಂದ ಹೆಣ್ಣು ಮಗುವಿಗೆ ಜನ್ಮ ನೀಡಿದ 14ರ ಬಾಲಕಿ
ಚೆನ್ನೈ: , ಗುರುವಾರ, 3 ಸೆಪ್ಟಂಬರ್ 2015 (17:02 IST)
14 ವರ್ಷ ವಯಸ್ಸಿನ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರಗೈದ 65 ವರ್ಷ ವಯಸ್ಸಿನ ಆರೋಪಿಯನ್ನು ಪೊಲೀಸರು ಸೆಲಾಯೂರ್ ಪ್ರದೇಶದಲ್ಲಿ ಬಂದಿಸಿದ್ದಾರೆ.
 
2014ರ ಜನೆವರಿಯಿಂದ ಅತ್ಯಾಚಾರಕ್ಕೊಳಗಾದ ಬಾಲಕಿ ಸೆಲೈಯೂರ್ ಬಡಾವಣೆಯಲ್ಲಿರುವ ಗುಡ್ ಶೆಫರ್ಡ್ ಚಿಲ್ಟ್ರನ್ಸ್ ಹೋಮ್‌ನಲ್ಲಿ ಆಶ್ರಯ ಪಡೆದಿದ್ದಳು. ಆಶ್ರಮದ ಸಂಚಾಲಕ ಪೌಲ್ ಎಮ್ಯಾನುವೆಲ್ ಮತ್ತು ಎಮ್ಯಾನುವೆಲ್ ತಂದೆ ಪ್ರಭುದಾಸ್ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.     
 
ತಂದೆ ಮತ್ತು ಮಗನ ಕಿರುಕುಳದಿಂದ ಬೇಸತ್ತ ಬಾಲಕಿ, ಶೋಲಿಂಗ್‌ನಲ್ಲೂರ್‌ನಲ್ಲಿ ತನ್ನ ಪೋಷಕರೊಂದಿಗೆ ವಾಸಿಸಲು ಆರಂಭಿಸಿದ್ದಾಳೆ. ಕೆಲ ದಿನಗಳ ನಂತರ ಬಾಲಕಿ ಹೊಟ್ಟೆ ತುಂಬಾ ನೋವಾಗುತ್ತಿದೆ ಎಂದು ಪೋಷಕರಿಗೆ ಮಾಹಿತಿ ನೀಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ವೈದ್ಯರು ಬಾಲಕಿಯನ್ನು ಚಿಕಿತ್ಸೆಗೊಳಫಡಿಸಿ ಗರ್ಭಿಣಿಯಾಗಿದ್ದಾಳೆ ಎಂದು ತಿಳಿಸಿದ್ದಾರೆ.
 
ಕಳೆದ ಸೋಮವಾರದಂದು ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆಸ್ಪತ್ರೆಯ ವೈದ್ಯರು ಮಗುವಿನ ತಂದೆಯ ಬಗ್ಗೆ ವಿಚಾರಣೆ ನಡೆಸಿದಾಗ ತನ್ನ ಮೇಲೆ ಪ್ರಭುದಾಸ್ ಎಂಬಾತ ನಿರಂತರವಾಗಿ ಅತ್ಯಾಚಾರ ನಡೆಸಿರುವ ಬಗ್ಗೆ ಮಾಹಿತಿ ನೀಡಿದ್ದಾಳೆ.ಯಾರಿಗಾದರೂ ತಿಳಿಸಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೆದರಿಸಿದ್ದ ಎಂದು ಬಾಲಕಿ ಬಾಯಿಬಿಟ್ಟಿದ್ದಾಳೆ.
 
ಬಾಲಕಿಯ ತಾಯಿ, ಪೊಲೀಸರಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿ ಪ್ರಭುದಾಸ್‌‌ನನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.
 

Share this Story:

Follow Webdunia kannada