Select Your Language

Notifications

webdunia
webdunia
webdunia
webdunia

ಸೆಕ್ಸ್‌ನಲ್ಲಿ ಪಾಲ್ಗೊಳ್ಳದಿದ್ರೆ ಬ್ಲ್ಯಾಕ್‌ ಮ್ಯಾಜಿಕ್‌ನಿಂದ ಹತ್ಯೆ ಮಾಡ್ತೇನೆ ಎಂದ ಸ್ವಯಂಘೋಷಿತ ದೇವಮಾನವ

ಸೆಕ್ಸ್‌ನಲ್ಲಿ ಪಾಲ್ಗೊಳ್ಳದಿದ್ರೆ ಬ್ಲ್ಯಾಕ್‌ ಮ್ಯಾಜಿಕ್‌ನಿಂದ ಹತ್ಯೆ ಮಾಡ್ತೇನೆ ಎಂದ ಸ್ವಯಂಘೋಷಿತ ದೇವಮಾನವ
ಗಾಜಿಯಾಬಾದ್ , ಗುರುವಾರ, 13 ಆಗಸ್ಟ್ 2015 (15:53 IST)
ಬ್ಲ್ಯಾಕ್ ಮ್ಯಾಜಿಕ್‌ನಿಂದ ಸಹೋದರರನ್ನು ಹತ್ಯೆ ಮಾಡುವುದಾಗಿ ಬೆದರಿಸಿದ ಮಾಂತ್ರಿಕನೊಬ್ಬ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಪೊಲೀಸರ ಅತಿಥಿಯಾದ ಘಟನೆ ವರದಿಯಾಗಿದೆ. ಆತನ ಸಹಚರ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಗಾಜಿಯಾಬಾದ್‌ನ ವಿಜಯ್ ನಗರ ಪ್ರದೇಶದ ನಿವಾಸಿಯಾದ ಆರೋಪಿ ಮಾಂತ್ರಿಕ ಅಬ್ದುಲ್ಲಾ ಮುಷ್ರಫ್‌ನನ್ನು ಬಂಧಿಸಲಾಗಿದ್ದು, ಆತನ ಸಹಚರ ಅಕ್ಷಯ್ ರಾಜೋರಿಯಾ ಅಲಿಯಾಸ್ ಹನಿ ಪರಾರಿಯಾಗಿದ್ದಾನೆ ಎಂದು ಡಿಸಿಪಿ ಅಜಯ್ ಕುಮಾರ್ ತಿಳಿಸಿದ್ದಾರೆ.
 
ಕಳೆದ ಜುಲೈ 24 ರಂದು ಶಕರ್‌ಪುರ್ ಪೊಲೀಸ್ ಠಾಣೆಗೆ ತೆರಳಿದ ಯುವತಿಯೊಬ್ಬಳು, ಕಳೆದ ವರ್ಷ ನನ್ನ ನೆರಮನೆಯವನಾದ ಅಕ್ಷಯ್ ನನ್ನನ್ನು ಮಾಂತ್ರಿಕನ ಬಳಿ ಕರೆದುಕೊಂಡು ಹೋಗಿ ಇಬ್ಬರು ಸೇರಿ ಅತ್ಯಾಚಾರವೆಸಗಿ ಬ್ಲ್ಯೂಫಿಲ್ಮ್ ತೆಗೆದಿದ್ದಾರೆ ಎಂದು ದೂರು ನೀಡಿದ್ದಾಳೆ.  
 
ಕಾಲಾಜಾದುವಿನಿಂದ ಸಹೋದರರನ್ನು ಹತ್ಯೆ ಮಾಡುವುದಾಗಿ ತಾಂತ್ರಿಕ ಬೆದರಿಸಿದ್ದ ಎಂದು ಮಹಿಳೆ ದೂರಿದ್ದಾಳೆ.
 
ಕಳೆದ ಜುಲೈ 4 ರಂದು ಮತ್ತೆ ಆರೋಪಿ ಅಕ್ಷಯ್ ನನ್ನನ್ನು ಮಾಂತ್ರಿಕನ ಬಳಿ ಕರೆದುಕೊಂಡು ಹೋಗಿ, ಕೋಣೆಯಲ್ಲಿ 19 ದಿನಗಳವರೆಗೆ ಕೂಡಿ ಹಾಕಿ ನನಗೆ ಒತ್ತಾಯಪೂರ್ವಕವಾಗಿ ಡಗ್ಸ್ ಸೇವಿಸುವಂತೆ ಮಾಡಿ ಹಲ್ಲೆ ಮಾಡಿದ್ದಲ್ಲದೇ ಸೆಕ್ಸ್‌ಗಾಗಿ ಬಳಸಿಕೊಂಡಿದ್ದಾರೆ ಎಂದುಪ ತಿಳಿಸಿದ್ದಾಳೆ.  
 
ಈ ಸಂದರ್ಭದಲ್ಲಿ ಮಾಂತ್ರಿಕ ಅಬ್ದುಲ್ಲಾನಿಗೆ ಪರಿಚಯವಿದ್ದ ಇತರ ಇಬ್ಬರು ವ್ಯಕ್ತಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ಕೆಲ ಖಾಲಿ ಪೇಪರ್‌ಗಳ ಮೇಲೆ ಸಹಿಹಾಕಿಸಿಕೊಂಡು ಚಿನ್ನಾಭರಣ ಮತ್ತು ಮೊಬೈಲ್ ಫೋನ್ ದೋಚಿದ್ದಾರೆ. 
 
ಆರೋಪಿ ತಾಂತ್ರಿಕನಿಗೆ ಮದುವೆಯಾಗಿದ್ದು ಐದು ಮಂದಿ ಮಕ್ಕಳಿದ್ದಾರೆ. ಆರೋಪಿ ಅಕ್ಷಯ್ ಸೇರಿದಂತೆ ಇತರ ಇಬ್ಬರು ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಕುಮಾರ್ ತಿಳಿಸಿದ್ದಾರೆ.

Share this Story:

Follow Webdunia kannada