Select Your Language

Notifications

webdunia
webdunia
webdunia
webdunia

ಶೀಘ್ರದಲ್ಲಿಯೇ ರಾಮಮಂದಿರ ನಿರ್ಮಾಣಕ್ಕೆ ಮೋದಿ ಸೂಕ್ತ ಹೆಜ್ಜೆ

ಶೀಘ್ರದಲ್ಲಿಯೇ ರಾಮಮಂದಿರ ನಿರ್ಮಾಣಕ್ಕೆ ಮೋದಿ ಸೂಕ್ತ ಹೆಜ್ಜೆ
ಲಕ್ನೋ , ಮಂಗಳವಾರ, 31 ಮಾರ್ಚ್ 2015 (15:26 IST)
ಕೇಂದ್ರದಲ್ಲಿ ಅಧಿಕಾರರೂಢವಾಗಿರುವ ಎನ್‌ಡಿಎ ಸರಕಾರ ರಾಮಜನ್ಮಭೂಮಿ ವಿವಾದದ ಬಗ್ಗೆ ಮೌನವಾಗಿದ್ದರೂ ರಾಮಜನ್ಮಭೂಮಿ ನ್ಯಾಸ ಅಧ್ಯಕ್ಷ ನಿತ್ಯಾ ಗೋಪಾಲ್ ದಾಸ್, ಮೋದಿ ರಾಮಮಂದಿರ ನಿರ್ಮಾಓಣದ ಬಗ್ಗೆ ಶೀಘ್ರದಲ್ಲಿಯೇ ಅಂತಿಮ ತೀರ್ಮಾನ ತೆಗೆದುಕೊಳ್ಳುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ರಾಮಜನ್ಮಭೂಮಿ ವಿವಾದಕ್ಕೆ ನ್ಯಾಯಾಲಯದ ಹೊರಗೆ ಪರಿಹಾರ ಕಂಡುಕೊಳ್ಳುವುದು ಸೂಕ್ತ ಎನ್ನುವುದು ಮೋದಿ ಸರಕಾರದ ಬಯಕೆ. ಸಂಸತ್ತಿನಲ್ಲಿಯೂ ಕೂಡಾ ಒಮ್ಮತದ ಬೆಂಬಲ ಪಡೆಯಲು ಪ್ರಯತ್ನಿಸುತ್ತಿದೆ. ರಾಮಮಂದಿರ ನಿರ್ಮಾಣಕ್ಕೆ ಇದು ಸೂಕ್ತ ಸಮಯ ಎಂದರು.

ಶ್ರೀರಾಮ ದೇವರು ಟೆಂಟ್‌ನಲ್ಲಿರುವುದರಿಂದ ಪ್ರಧಾನಿ ಮೋದಿ ಶೀಘ್ರ ಪರಿಹಾರ ಕಂಡು ಅಧ್ಭುತ ರಾಮಮಂದಿರ ನಿರ್ಮಾಣಕ್ಕೆ ಮುಂದಾಗುತ್ತಾರೆ ಎನ್ನುವ ನಂಬಿಕೆಯಿದೆ ಎಂದು ದಾಸ್ ತಿಳಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಮಜನ್ಮಭೂಮಿ ನ್ಯಾಸ, ಅಯೋಧ್ಯೆಯ ಕರಸೇವಕಪುರಂನಲ್ಲಿ  ಈಗಾಗಲೇ ಸಾವಿರಾರು ಕಾಲಂಗಳ ಕಂಬಗಳನ್ನು ನಿರ್ಮಿಸಿದೆ. ಕೇಂದ್ರ ಸರಕಾರ ಅನುಮತಿ ನೀಡಿದ ಕೆಲವೇ ದಿನಗಳಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ.  

ಬಿಜೆಪಿಯ ಹಿರಿಯ ನಾಯಕರೊಬ್ಬರು ಮಾತನಾಡಿ, ರಾಮಮಂದಿರ ವಿಷಯ ತುಂಬಾ ಸೂಕ್ಷ್ಮಲಾಗಿದ್ದರಿಂದ ಸದ್ಯಕ್ಕೆ ವಿಷಯವನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಭೂ-ಸ್ವಾಧೀನ ಮತ್ತು ಸುಧಾರಣೆ ನೀತಿಗಳತ್ತ ಮಾತ್ರ ಸರಕಾರ ಗಮನಹರಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Share this Story:

Follow Webdunia kannada