Select Your Language

Notifications

webdunia
webdunia
webdunia
webdunia

ಜಯಲಲಿತಾ ಜೈಲು ಪಾಲು: ಆತ್ಮಹತ್ಯೆಗೆ ಯತ್ನಿಸಿದ ಶಾಲಾ ಬಾಲಕಿ

ಜಯಲಲಿತಾ ಜೈಲು ಪಾಲು: ಆತ್ಮಹತ್ಯೆಗೆ ಯತ್ನಿಸಿದ ಶಾಲಾ ಬಾಲಕಿ
ಮಧುರೈ , ಸೋಮವಾರ, 29 ಸೆಪ್ಟಂಬರ್ 2014 (09:17 IST)
ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಎಐಡಿಎಂಕೆ ನಾಯಕಿ ಜಯಲಲಿತಾ ಅವರು ಜೈಲು ಪಾಲಾಗಿರುವುದಕ್ಕೆ ನೊಂದು 17 ವರ್ಷದ ಶಾಲಾ ಬಾಲಕಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ. 

ಯುವತಿಯನ್ನು ಎಮ್. ನಾಗಲಕ್ಷ್ಮೀ ಎಂದು ಗುರುತಿಸಲಾಗಿದೆ. ಆಕೆಯ 80 ಪ್ರತಿಶತ ದೇಹ ಸುಟ್ಟಿದ್ದು ಮಧುರೈನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೋಲಿಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
 
ಭೃಷ್ಟಾಚಾರಕ್ಕೆ ಸಂಬಂಧಿಸಿದಂತೆ ಜಯಲಲಿತಾರವರಿಗೆ 4 ವರ್ಷ ಜೈಲು ಶಿಕ್ಷೆಯಾಗಿದ್ದಕ್ಕೆ ಅತಿಯಾಗಿ ನೊಂದಿದ್ದ ನಾಗಲಕ್ಷ್ಮೀ  ಮನೆಯಲ್ಲಿ  ಯಾರೂ ಇಲ್ಲದ ಸಮಯದಲ್ಲಿ ಜೀವ ತೆಗೆದುಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ. 

Share this Story:

Follow Webdunia kannada