Select Your Language

Notifications

webdunia
webdunia
webdunia
webdunia

ಗರ್ಲ್‌ಫ್ರೆಂಡ್‌ಗಳ ಬೇಡಿಕೆ ಈಡೇರಿಸಲು ಮದ್ಯ ಸ್ಮಗ್ಲಿಂಗ್‌ನಲ್ಲಿ ತೊಡಗಿದ್ದ ಶಾಲಾ ವಿದ್ಯಾರ್ಥಿಗಳು

ಗರ್ಲ್‌ಫ್ರೆಂಡ್‌ಗಳ ಬೇಡಿಕೆ ಈಡೇರಿಸಲು ಮದ್ಯ ಸ್ಮಗ್ಲಿಂಗ್‌ನಲ್ಲಿ ತೊಡಗಿದ್ದ ಶಾಲಾ ವಿದ್ಯಾರ್ಥಿಗಳು
ಬರೇಲಿ(ಉತ್ತರಪ್ರದೇಶ) , ಸೋಮವಾರ, 2 ಮಾರ್ಚ್ 2015 (15:53 IST)
ಮದ್ಯ ಸ್ಮಗ್ಲಿಂಗ್‌ ಮಾಡುತ್ತಿದ್ದ 12ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ನಗರದ ಸೆಟಲೈಟ್ ಬಸ್‌ನಿಲ್ದಾಣದಿಂದ ಪೊಲೀಸರು ಬಂಧಿಸಿದ್ದಾರೆ
 
ಹಾರು ನಾಗ್ಲಾ ಪಟ್ಟಣದ ಇಬ್ಬರು ವಿದ್ಯಾರ್ಥಿಗಳನ್ನು ರಾಜೇಶ್ ಪ್ರಜಾಪತಿ(20) ಮತ್ತು ರಿತೇಶ್(20) ಎಂದು ಗುರುತಿಸಲಾಗಿದೆ. ಆರೋಪಿ ವಿದ್ಯಾರ್ಥಿಗಳ ವಿರುದ್ಧ ಅಬಕಾರಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಅಬಕಾರಿ ಅಧಿಕಾರಿ ಕೆ.ಪಿ.ಯಾದವ್ ತಿಳಿಸಿದ್ದಾರೆ.
 
ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ವಿದ್ಯಾರ್ಥಿಗಳು ಹರಿಯಾಣಾದಿಂದ ಬರೇಲಿಗೆ ಮದ್ಯ ಸ್ಮಗ್ಲಿಂಗ್‌ ಮಾಡುತ್ತಿರುವುದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ. ತಮ್ಮ ಗರ್ಲ್‌ಫ್ರೆಂಡ್‌ಗಳಿಗೆ ದುಬಾರಿ ಗಿಫ್ಟ್‌ಗಳನ್ನು ಉಡುಗೊರೆಯಾಗಿ ಕೊಡಲು ಹಣವನ್ನು ಬಳಸುತ್ತಿದ್ದುದಾಗಿ ತಿಳಿಸಿದ್ದಾರೆ. 
 
ಇಬ್ಬರು ವಿದ್ಯಾರ್ಥಿಗಳು ಮದ್ಯ ಸ್ಮಗ್ಲಿಂಗ್ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಪಡೆದ ಅಬಕಾರಿ ಅಧಿಕಾರಿಗಳು , ಸೆಟಲೈಟ್ ಬಸ್ ನಿಲ್ದಾಣದ ಬಳಿ 30 ಬಾಟಲಿಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
 

Share this Story:

Follow Webdunia kannada