Select Your Language

Notifications

webdunia
webdunia
webdunia
webdunia

ಹೈಸ್ಕೂಲ್ ಬಾಲಕರಿಂದ ಗ್ಯಾಂಗ್ ರೇಪ್

ಹೈಸ್ಕೂಲ್ ಬಾಲಕರಿಂದ ಗ್ಯಾಂಗ್ ರೇಪ್
ಮುಂಬೈ , ಶನಿವಾರ, 28 ನವೆಂಬರ್ 2015 (09:51 IST)
ನಾಲ್ವರು ಹೈಸ್ಕೂಲ್ ಬಾಲಕರು ಸೇರಿ ತಮ್ಮದೇ ಸಹಪಾಠಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ. ರೇಪ್ ನಡೆಸಿದ್ದಷ್ಟೇ ಅಲ್ಲದೇ ಈ ಕುಕೃತ್ಯವನ್ನು ಚಿತ್ರೀಕರಿಸಿರುವ ಬಾಲಕರು ವಾಟ್ಸಾಪ್‍ನಲ್ಲಿ ಅದನ್ನು ಹಂಚಿಕೊಂಡಿದ್ದಾರೆ. 
 
ಬಾಲ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರನ್ನು ಬಾಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
 
ನವೆಂಬರ್ 8ರಂದು ಈ ಘಟನೆ ನಡೆದಿದ್ದು, ಬಹಳ ತಡವಾಗಿ ಬೆಳಕಿಗೆ ಬಂದಿದೆ. ನಾಲ್ವರು ಆರೋಪಿಗಳಲ್ಲಿ ಒಬ್ಬ ಬಾಲಕ ಪಾಠದ ಬಗ್ಗೆ ಚರ್ಚೆ ನಡೆಸಬೇಕಿದೆ, ನೀನು ನಮ್ಮ ಮನೆಗೆ ಬಂದು ಸಹಾಯ ಮಾಡು ಎಂದು ನೆರೆಮನೆಯಲ್ಲಿಯೇ ನೆಲಸಿರುವ ಬಾಲಕಿಗೆ ಹೇಳಿದ್ದಾನೆ. ಅದಕ್ಕೆ ಸಮ್ಮತಿಸಿದ ಬಾಲಕಿ ಆತನ ಮನೆಗೆ ಹೋಗಿದ್ದಾಳೆ.  ಆಕೆ ಆತನ ಮನೆಗೆ ಹೋಗುವ ಮೊದಲೇ ಅಲ್ಲಿ ಮತ್ತೆ ಮೂವರು ಬಾಲಕರು ಸಹ ಹಾಜರಿದ್ದರು. ಆಕೆಯ ಅಸಹಾಯಕತೆಯ ಲಾಭ ಪಡೆದುಕೊಂಡ ಬಾಲಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಅತ್ಯಾಚಾರ ಮಾಡಿದ ಬಳಿಕ ಈ ವಿಚಾರವನ್ನು ಯಾರ ಜೊತೆ ಹೇಳಿದರೆ ನಾವು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡುತ್ತೇವೆ ಎಂದು ಅವರು ಬೆದರಿಸಿದ್ದಾರೆ.
 
ಬೆದರಿಕೆಗೆ ಹೆದರಿ ಬಾಲಕಿ ಈ ವಿಚಾರವನ್ನು ಮುಚ್ಚಿಟ್ಟಿದ್ದಳು. ಆದರೆ ದುರುಳ ಬಾಲಕರು ತಾವು ಎಸಗಿದ ಕೃತ್ಯದ ವಿಡಿಯೋವನ್ನು ವಾಟ್ಸಾಪ್‍ನಲ್ಲಿ ಹರಿಯ ಬಿಟ್ಟಿದ್ದಾರೆ. ಈ ವೀಡಿಯೋ ವೈರಲ್ ಆಗಿ ಹರಿದಾಡುತ್ತ  ಬಾಲಕಿಯ ಪೋಷಕರ ಮೊಬೈಲ್‍ಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. 

Share this Story:

Follow Webdunia kannada