Select Your Language

Notifications

webdunia
webdunia
webdunia
webdunia

ಮುಂಬೈ ಬ್ಲಾಸ್ಟ್ ಉಗ್ರ ಯಾಕೂಬ್ ಮೆಮನ್‌ ಗಲ್ಲು ಶಿಕ್ಷೆಗೆ ತಡೆ

ಮುಂಬೈ ಬ್ಲಾಸ್ಟ್ ಉಗ್ರ ಯಾಕೂಬ್ ಮೆಮನ್‌ ಗಲ್ಲು ಶಿಕ್ಷೆಗೆ ತಡೆ
ನವದೆಹಲಿ , ಮಂಗಳವಾರ, 28 ಜುಲೈ 2015 (15:44 IST)
1993ರ ಮುಂಬೈ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಯಾಕೂಬ್ ಅಬ್ದುಲ್ ರಜಾಕ್ ಮೆಮನ್ ಅರ್ಜಿಯನ್ನು ಪರಿಶೀಲಿಸಿದ ಮೂವರು ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಪೀಠ, ಮೆಮನ್ ಗಲ್ಲು ಶಿಕ್ಷೆ ನೀಡುವ ಬಗ್ಗೆ ಭಿನ್ನಾಭಿಪ್ರಾಯಗಳ ಬಂದಿರುವ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ನಿರ್ಧಾರಕ್ಕೆ ಬಿಡಲು ತೀರ್ಮಾನಿಸಲಾಗಿದೆ.  
 
ನ್ಯಾಯಮೂರ್ತಿ ಎ.ಆರ್.ದವೆ ಮತ್ತು ನ್ಯಾಯಮೂರ್ತಿ ಕುರಿಯನ್  ಜೋಸೆಫ್ ನೇತೃತ್ವದ ಪೀಠ, ಜುಲೈ 30 ಕ್ಕೆ ನಿಗದಿಯಾಗಿದ್ದ ಮೆಮನ್ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಿದೆ. 
 
ಆಟಾರ್ನಿ ಜನರಲ್ ಮುಕುಲ್ ರೋಹಟಗಿ ಮತ್ತು ಇತರ ಹಿರಿಯ ವಕೀಲರಾದ ರಾಜು ರಾಮಚಂದ್ರನ್ ಹೇಳಿಕೆ ನೀಡಿ, ಗಲ್ಲು ಶಿಕ್ಷೆಯ ಬಗ್ಗೆ ಇಬ್ಬರು ನ್ಯಾಯಮೂರ್ತಿಗಳಲ್ಲಿ ಭಿನ್ನಾಭಿಪ್ರಾಯಗಳು ಬಂದಿರುವುದರಿಂದ ಅಂತಿಮ ತೀರ್ಮಾನಕ್ಕೆ ಬರಲು ಸಾದ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 
 
ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠ, ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರ ಪೀಠಕ್ಕೆ ವರ್ಗಾಯಿಸಿದ್ದು, ಇಂದು ಸಂಜೆ ನಾಲ್ಕು ಗಂಟೆಗೆ ವಿಚಾರಣೆ ನಡೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
 
ಮುಖ್ಯ ನ್ಯಾಯಮೂರ್ತಿಗಳು ಹಿರಿಯ ನ್ಯಾಯಮೂರ್ತಿಗಳ ಪೀಠವನ್ನು ಸ್ಥಾಪಿಸಿ ಮೆಮನ್ ಗಲ್ಲು ಶಿಕ್ಷೆಯ ಬಗ್ಗೆ ನಾಳೆ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಮೂವರು ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಪೀಠ ಮನವಿ ಮಾಡಿದೆ. 
 

Share this Story:

Follow Webdunia kannada