Select Your Language

Notifications

webdunia
webdunia
webdunia
webdunia

ಪನ್ನೀರ್ ಸೆಲ್ವಂ ಮನವಿಗೆ ಮಣಿದು ಮುಖ್ಯಮಂತ್ರಿ : ಶಶಿಕಲಾ ನಟರಾಜನ್

ಪನ್ನೀರ್ ಸೆಲ್ವಂ ಮನವಿಗೆ ಮಣಿದು ಮುಖ್ಯಮಂತ್ರಿ : ಶಶಿಕಲಾ ನಟರಾಜನ್
ಚೆನ್ನೈ , ಸೋಮವಾರ, 6 ಫೆಬ್ರವರಿ 2017 (09:26 IST)
ಪನ್ನೀರ್ ಸೆಲ್ವಂ ಅವರ ಒತ್ತಾಯಕ್ಕೆ ಮಣಿದು ನಾನು ಮುಖ್ಯಮಂತ್ರಿ ಸ್ಥಾನಕ್ಕೇರಲು ಒಪ್ಪಿಕೊಂಡಿರುವುದಾಗಿ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಶಶಿಕಲಾ ನಟರಾಜನ್ ಹೇಳಿದ್ದಾರೆ. 

ರಾಷ್ಟ್ರೀಯ ಸುದ್ದಿ ವಾಹಿನಿಯೊಂದರಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ "ಅಮ್ಮ ಅಗಲಿಕೆ ಬಳಿಕ ಸ್ವತಃ ರಕ್ಷದ ಹೊಣೆ ಸಂಭಾಳಿಸುವಂತೆ ಮೊದಲು ಒತ್ತಾಯಿಸಿದ್ದು ಪನ್ನೀರ್ ಸೆಲ್ವಂ. ಮುಖ್ಯಮಂತ್ರಿ ಸ್ಥಾನವನ್ನಲಂಕರಿಸುವಂತೆ ಒತ್ತಾಯಿಸಿದ್ದು ಸಹ ಮತ್ತದೇ ಪನ್ನೀರ್ ಸೆಲ್ವಂ," ಎಂದಿದ್ದಾರೆ ಶಶಿಕಲಾ .
 
ತಮಿಳುನಾಡಿನ ರಾಜಕೀಯದಲ್ಲಾದ ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಆಪ್ತೆ, ಎಐಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಮುಖ್ಯಮಂತ್ರಿಯೆಂದು ಅಧಿಕೃತವಾಗಿ ಘೋಷಿಸಲಾಗಿದೆ.
 
ಚೆನ್ನೈನ ರಾಯಪೇಟೆಯಲ್ಲಿರುವ ಎಐಡಿಎಂಕೆ ಮುಖ್ಯ ಕಚೇರಿಯಲ್ಲಿ ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಜಯಾ ಸಾವಿನ ಬಳಿಕ ಮುಖ್ಯಮಂತ್ರಿಯಾಗಿದ್ದ ಪನ್ನೀರ್ ಸೆಲ್ವಂ ಈಗಾಗಲೇ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದು, ಈ ವಾರದಲ್ಲಿಯೇ ಶಶಿಕಲಾ ಅಧಿಕಾರವನ್ನು ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
 
ಮಹಿಳೆಯೋರ್ವರು ತಮಿಳುನಾಡು ಮುಖ್ಯಮಂತ್ರಿ ಸ್ಥಾನಕ್ಕೇರುತ್ತಿರುವುದು ಇದು ಮೂರನೆಯ ಬಾರಿ. ಈ ಮೊದಲು ಜಾನಕಿ ರಾಮಚಂದ್ರನ್ ಮತ್ತು ಜೆ. ಜಯಲಲಿತಾ  ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. 

Share this Story:

Follow Webdunia kannada

ಮುಂದಿನ ಸುದ್ದಿ

ಮನೆಕೆಲಸದಾಕೆ ಸಿಎಂ ಆಗುವುದು ಜಯಾಗೂ ಇಷ್ಟವಿರಲಿಲ್ಲ