Select Your Language

Notifications

webdunia
webdunia
webdunia
webdunia

ಎಐಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ಅಧಿಕಾರ ಸ್ವೀಕಾರ

ಎಐಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ  ಶಶಿಕಲಾ ಅಧಿಕಾರ ಸ್ವೀಕಾರ
ಚೆನ್ನೈ , ಶನಿವಾರ, 31 ಡಿಸೆಂಬರ್ 2016 (12:18 IST)
ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಾವಿನ ನಂತರ ಅವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಇಂದಿನಿಂದ ತಮಿಳಿನಾಡಿನಲ್ಲಿ ಚಿನ್ನಮ್ಮನ ದರ್ಬಾರ್ ಆರಂಭವಾಗಿದೆ. ಹೌದು ಜೆ. ಜಯಲಲಿತಾ ಅವರ ಆಪ್ತ ಸಖಿ ಶಶಿಕಲಾ ನಟರಾಜನ್ ಎಐಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧ ಆಯ್ಕೆ ಮಾಡಲಾಗಿತ್ತು. ಇಂದು 11.20ಕ್ಕೆ ರಾಯಪೇಟೆಯಲ್ಲಿರುವ ಎಐಡಿಎಂಕೆ ಪ್ರಧಾನ ಕಚೇರಿಯಲ್ಲಿ ಅವರು ಪ್ರಮಾಣವಚನವನ್ನು ಸ್ವೀಕರಿಸಿದ್ದು ಅಧಿಕೃತವಾಗಿ ಎಐಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. 
 
ಅಧಿಕಾರ ಸ್ವೀಕರಿಸುವ ಮೊದಲು ಶಶಿಕಲಾ ತಮ್ಮ ಗೆಳತಿ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಭಾವಚಿತ್ರಕ್ಕೆ ಪುಷ್ಪವಂದನೆ ಸಲ್ಲಿಸಿದರು. 
 
ಅನಾರೋಗ್ಯಕ್ಕೀಡಾಗಿ ಸೆಪ್ಟೆಂಬರ್ 22ರಂದು ಆಸ್ಪತ್ರೆ ಸೇರಿದ್ದ ಮುಖ್ಯಮಂತ್ರಿ ಜಯಲಲಿತಾ ಡಿಸೆಂಬರ್ 5 ರಂದು ಹೃದಯಾಘಾತದಿಂದ ಮರಣವನ್ನಪ್ಪಿದ್ದರು. ಬಳಿಕ ಅವರ ಆಪ್ತ ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಆ ಸ್ಥಾನ ಶಶಿಕಲಾ ಪಾಲಾಗಲಿದೆ ಎಂಬುದು ಬಹುಮಟ್ಟಿಗೆ ಖಚಿತವಾಗಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಖರ್ಗೆಯವರನ್ನು ಟೀಕಿಸುವ ಅರ್ಹತೆ ಇದೆಯೇ: ಪ್ರತಾಪ್ ಸಿಂಹಗೆ ಪ್ರಿಯಾಂಕಾ ಖರ್ಗೆ ತಿರುಗೇಟು