Select Your Language

Notifications

webdunia
webdunia
webdunia
webdunia

ಎಐಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಇಂದು ಶಶಿಕಲಾ ಅಧಿಕಾರ ಸ್ವೀಕಾರ

ಎಐಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಇಂದು ಶಶಿಕಲಾ ಅಧಿಕಾರ ಸ್ವೀಕಾರ
ಚೆನ್ನೈ , ಶನಿವಾರ, 31 ಡಿಸೆಂಬರ್ 2016 (11:40 IST)
ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆಪ್ತ ಸಖಿ ಜೆ. ಜಯಲಲಿತಾ ಅವರ ಆಪ್ತ ಸಖಿ ಎಐಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಶನಿವಾರ ಅಧಿಕಾರ ಸ್ವೀಕರಿಸಲಿದ್ದಾರೆ. 
 
ಕಳೆದ ಮೂರು ದಿನಗಳ ಹಿಂದೆ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧ ಆಯ್ಕೆ ಮಾಡಲಾಗಿತ್ತು. ಇಂದು 11.20ಕ್ಕೆ ರಾಯಪೇಟೆಯಲ್ಲಿರುವ ಎಐಡಿಎಂಕೆ ಪ್ರಧಾನ ಕಚೇರಿಯಲ್ಲಿ ಅವರು ಪ್ರಮಾಣವಚನವನ್ನು ಸ್ವೀಕರಿಸುತ್ತಿದ್ದು ಅಧಿಕೃತವಾಗಿ ಎಐಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಲಿದ್ದಾರೆ. 
 
ಅನಾರೋಗ್ಯಕ್ಕೀಡಾಗಿ ಸೆಪ್ಟೆಂಬರ್ 22ರಂದು ಆಸ್ಪತ್ರೆ ಸೇರಿದ್ದ ಮುಖ್ಯಮಂತ್ರಿ ಜಯಲಲಿತಾ ಡಿಸೆಂಬರ್ 5 ರಂದು ಹೃದಯಾಘಾತದಿಂದ ಮರಣವನ್ನಪ್ಪಿದ್ದರು. ಬಳಿಕ ಅವರ ಆಪ್ತ ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಆ ಸ್ಥಾನ ಶಶಿಕಲಾ ಪಾಲಾಗಲಿದೆ ಎಂದ ಸಹ ಹೇಳಲಾಗುತ್ತಿದೆ. ಇಂದು ಶಶಿಕಲಾ ನಟರಾಜನ್ ಪಕ್ಷದ ಮುಖ್ಯಸ್ಥೆಯಾಗಿ ಅಧಿಕಾರ ಸ್ವೀಕರಿಸುತ್ತಿದ್ದು, ಅವರು ಮುಖ್ಯಮಂತ್ರಿಯಾಗುತ್ತಾರೋ ಅಥವಾ ಪ್ರಧಾನ ಕಾರ್ಯದರ್ಶಿಯಾಗಷ್ಟೇ ಮುಂದುವರೆಯುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಬಿಡುಗಡೆ ಮಾಡಿರುವ ’ಭೀಮ್’ ಆಪ್ ವಿಶೇಷಗಳು