ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ತೀರ್ಪನ್ನ ಇನ್ನೊಂದು ವಾರದಲ್ಲಿ ಸುಪ್ರೀಂಕೋರ್ಟ್ ಪ್ರಕಟಿಸಲಿದೆ. ಪ್ರಕರಣದಲ್ಲಿ ತಮಿಳುನಾಡು ಸಿಎಂ ಶಶಿಕಲಾ ಸಹ ಆರೋಪಿಯಾಗಿದ್ದು, ಒಂದೊಮ್ಮೆ ಶಿಕ್ಷೆಯಾದರೆ ಸಿಎಂ ಪಟ್ಟ ತ್ಯಜಿಸಬೇಕಾಗುತ್ತದೆ.
ತಮಿಳುನಾಡು ಮುಖ್ಯಮಂತ್ರಿಯಾಗಿ ಸೋಮವಾರ ಚಿನ್ನಮ್ಮ ಅಧಿಕಾರ ಸ್ವೀಕಾರ..?
60 ಕೋಟಿ ರೂಪಾಯಿ ಅಕ್ರಮ ಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಲಲಿತಾ, ಶಶಿಕಲಾ ಮತ್ತಿತರಿಗೆ ಪರಪ್ಪನ ಅಗ್ರಹಾರದ ಸಿಬಿಐ ವಿಶೇಷ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿತ್ತು. ಬಳಿಕ ಹೈಕೋರ್ಟ್ ಶಿಕ್ಷೆಯನ್ನ ರದ್ದುಪಡಿಸಿತ್ತು.
ಹೈಕೋರ್ಟ್ ಆದೇಶ ಪ್ರಶ್ನಿಸಿ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಇದೀಗ, ವಿಚಾರಣೆ ಮುಗಿದು ತೀರ್ಪು ನೀಡುವ ಕಾಲ ಬಂದಿದೆ. ಒಂದು ವಾರದೊಳಗಾಗಿ ತೀರ್ಪು ಬರುವ ಸಾಧ್ಯತೆ ಇದ್ದು, ಶಶಿಕಲಾ ಭವಿಷ್ಯ ನಿರ್ಧಾರವಾಗಲಿದೆ.