ಏಗೋನ್ ಇಂಟರ್ನ್ಯಾಷನಲ್ ಟೆನಿಸ್ ಪಂದ್ಯಾವಳಿಯಲ್ಲಿ ಅಗ್ರಶ್ರೇಯಾಂಕಿತ ಆಟಗಾರ್ತಿಯಾದ ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿ ಎದುರಾಳಿ ಕರೋಲಿನಾ ಪ್ಲಿಸ್ಕೋವಾ ಮತ್ತು ಮಿಶೆಲ್ಲಾ ಕ್ರಾಜೆಕ್ ವಿರುದ್ಧ ಜಯಗಳಿಸಿ ಕ್ವಾರ್ಟರ್ ಪೈನಲ್ ತಲುಪಿದ್ದಾರೆ.
ಸಾನಿಯಾ ಮತ್ತು ಹಿಂಗೀಸ್ ಜೋಡಿ ಜೆಕ್-ಡಚ್ ಜೋಡಿಯ ವಿರುದ್ಧ 6-0 6-2 ಸೆಟ್ಗಳ ಅಂತರದಿಂದ ಜಯಗಳಿಸಿ 731000 ಡಾಲರ್ ಮೊತ್ತದ ಪಂದ್ಯಾವಳಿಯಲ್ಲಿ ಕ್ವಾರ್ಟರ್ಗೆ ಪ್ರವೇಶ ಪಡೆದಿದ್ದಾರೆ.
ಪಂದ್ಯದ ಆರಂಭದಲ್ಲಿ ಬ್ರೆಕ್ ಚಾನ್ಸ್ಗಳನ್ನು ಪಡೆದ ಸಾನಿಯಾ -ಹಿಂಗೀಸ್ ಜೋಡಿ ಎದುರಾಳಿಯ ವಿರುದ್ಧ ಉತ್ತಮ ಹೊಡೆತಗಳನ್ನು ಬಾರಿಸಿ ಪಂದ್ಯದಲ್ಲಿ ಜಯಭೇರಿ ಬಾರಿಸಿದ್ದಾರೆ.
ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸಾನಿಯಾ- ಹಿಂಗೀಸ್ ಜೋಡಿ ಚೀನಾ-ಇಟಲಿ ಜೋಡಿಯಾದ ಹುವಾ ಚಿಂಗ್ ಚಾನ್ ಮತ್ತು ಫ್ಲಾವಿಯಾ ಪೆನ್ನೆಟ್ಟಾ ವಿರುದ್ಧ ಹಣಾಹಣಿ ನಡೆಸಲಿದ್ದಾರೆ.