Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಸ್ವಚ್ಛ ಭಾರತ್ ಅಭಿಯಾನದಲ್ಲಿ ಸಾನಿಯಾ

ಪ್ರಧಾನಿ ಮೋದಿ ಸ್ವಚ್ಛ ಭಾರತ್ ಅಭಿಯಾನದಲ್ಲಿ ಸಾನಿಯಾ
ಹೈದರಾಬಾದ್ , ಶುಕ್ರವಾರ, 17 ಅಕ್ಟೋಬರ್ 2014 (14:58 IST)
ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ್ ಅಭಿಯಾನಕ್ಕೆ ಸೇರ್ಪಡೆಗೊಂಡ, ಟೆನಿಸ್ ತಾರೆ ಸಾನಿಯಾ ಮಿರ್ಜಾ ಇತರ ಸ್ವಯಂ ಸೇವಕರ ಜತೆ ಹೈದರಾಬಾದ್ ರಸ್ತೆಗಳನ್ನು ಸ್ವಚ್ಛಗೊಳಿಸಿದರು.  

ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿಯವರಿಂದ ಅವರು ಅಭಿಯಾನಕ್ಕೆ ನಾಮಿನೇಟ್ ಆಗಿದ್ದರು. ಮೋದಿ ಕನಸಿನ ಅಭಿಯಾನವಾದ ಸ್ವಚ್ಛ  ಭಾರತ  ಅಭಿಯಾನದಲ್ಲಿ ಪಾಲ್ಗೊಳ್ಳಲು ಅಂಬಾನಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಬಾಕ್ಸರ್ ಮೇರಿ ಕೋಮ್, ಪ್ರಸಿದ್ಧ ನಟ ಅಮಿತಾಬ್ ಬಚ್ಚನ್ ಮತ್ತು ಟೆನಿಸ್ ತಾರೆ ಸಾನಿಯಾ ಮಿರ್ಜಾ ಸೇರಿದಂತೆ ಒಂಬತ್ತು ಪ್ರಮುಖ ವ್ಯಕ್ತಿಗಳನ್ನು ಆಹ್ವಾನಿಸಿದ್ದರು. 
 
ಅಕ್ಟೋಬರ್ 2 ರಂದು ಸ್ವಚ್ಛ ಭಾರತ್ ಆಂದೋಲನಕ್ಕೆ , ಚಾಲನೆ ನೀಡಿದ್ದ ಪ್ರಧಾನಿ ಮೋದಿ, ಈ ಅಭಿಯಾನವನ್ನು ಮುಂದುವರೆಸಲು ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್, ಚಿತ್ರತಾರೆಯರಾದ ಸಲ್ಮಾನ್ ಖಾನ್ ಮತ್ತು ಪ್ರಿಯಾಂಕ ಚೋಪ್ರ ಸೇರಿದಂತೆ ಒಂಬತ್ತು ಪ್ರಸಿದ್ಧ ವ್ಯಕ್ತಿಗಳಿಗೆ ಆಮಂತ್ರಣ ನೀಡಿದ್ದರು ಮತ್ತು ಪ್ರತಿಯೊಬ್ಬರ ಬಳಿ ಮತ್ತೆ ಒಂಬತ್ತು ಜನರನ್ನು ನಾಮಿನೇಟ್ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ತಾವು ಪ್ರಾರಂಭಿಸಿದ್ದ ಅಭಿಯಾನ ಸಮರೋಪಾದಿಯಲ್ಲಿ ಅವ್ಯಾಹತವಾಗಿ ಮುಂದುವರೆಯಬೇಕೆನ್ನುವುದು ಅವರ ಚಿಂತನೆ. 

Share this Story:

Follow Webdunia kannada